ನಿಮ್ಮ ಚಿಕ್ಕಮಗಳೂರಿನ ಆಟ ಇಲ್ಲಿ ಆಡಲು ಬಂದ್ರೆ ಬಿಡಲ್ಲ, ರಾಮನಗರ ಎಸ್‌ಪಿಗೆ ಎಚ್‌ಡಿಕೆ ಚಾರ್ಜ್
ರಾಮನಗರ ಪೊಲೀಸ್ ವರಿಷ್ಠಾಧಿಕಾರಿ ಸಂತೋಷ್ ಬಾಬು ವಿರುದ್ಧ ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ರಾಮನಗರ, (ಫೆ.13): ರಾಮನಗರ ಪೊಲೀಸ್ ವರಿಷ್ಠಾಧಿಕಾರಿ ಸಂತೋಷ್ ಬಾಬು ವಿರುದ್ಧ ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಕಿಡಿಕಾರಿದ್ದಾರೆ.
Hijab Row: ಹೈಕೋರ್ಟ್ ಆದೇಶ ಉಲ್ಲಂಘಿಸಿದರೆ ಮುಲಾಜಿಲ್ಲದೇ ಕ್ರಮ: ರಾಮನಗರ ಎಸ್‌ಪಿ ಖಡಕ್ ವಾರ್ನಿಂಗ್
ಇವತ್ತು ಮದ್ಯದ ಬಾಟೆಲ್ ಮಾರಾಟ ಮಾಡ್ತಿರುವ ಎಲ್ಲಾ ಅಂಗಡಿಗಳನ್ನ ರೇಡ್ ಮಾಡ್ತೀರಾ. ನಿಮ್ಮ ಇಲಾಖೆಯ ಗೋವಿಂದರಾಜು 500 ಬಾಟೆಲ್ ಸಿಕ್ಕಿದವರನ್ನ ಸ್ಟೇಷನ್ ಬೇಲ್ ಕೊಟ್ಟು ಕಳುಹಿಸುತ್ತಾನೆ. 20 ಬಾಟೆಲ್ ಇಟ್ಟಿದ್ದ ರೈತರು ಹೊಲಗಳಲ್ಲಿ ಕೆಲಸ ಮಾಡಿ ಕುಡಿಯಲು ಇಟ್ಟುಕೊಂಡಿದ್ದ ಜೈಲಿಗೆ ಕಳುಹಿಸುತ್ತೀರಿ ಎಂದು ಗರಂ ಆಗಿದ್ದಾರೆ. ಅಲ್ಲದೇ ಸರ್ಕಾರಕ್ಕೆ ಹೇಳಿ ಇದನ್ನೆಲ್ಲಾ ನಿಲ್ಲಿಸಲು . ನಿಮ್ಮ ಚಿಕ್ಕಮಗಳೂರಿನ ಆಟ ಇಲ್ಲಿ ಆಡಲು ಬಂದ್ರೆ ಬಿಡಲ್ಲ ಎಂದು ಚಾರ್ಜ್ ಮಾಡಿದ್ದಾರೆ.