Asianet Suvarna News Asianet Suvarna News

ಲಾಕ್‌ಡೌನ್‌: ಅಕ್ಕಿ, ಬೇಳೆ ಸಕ್ಕರೆ ಜೊತೆ ಮಹಿಳೆಯರಿಗಾಗಿ ಸ್ಯಾನಿಟರಿ ಪ್ಯಾಡ್

ಲಾಕ್‌ಡೌನ್ ಸಂದರ್ಭ ಕೆಲಸ, ಸಂಬಳವಿಲ್ಲದೆ ಜನ ಕಷ್ಟಪಡುತ್ತಿರುವ ಸಂದರ್ಭದಲ್ಲಿ ಬಡಜನರಿಗಾಗಿ ದಿನಸಿ ಕಿಟ್‌ಗಳನ್ನು ವಿತರಿಸಲಾಗಿದೆ. ಅಗತ್ಯದ ವಸ್ತುಗಳ ಜೊತೆ ಮಹಿಳೆಯರಿಗಾಗಿ ಸ್ಯಾನಿಟರಿ ಪ್ಯಾಡ್‌ಗಳನ್ನು ಹಂಚಿರುವುದು ವಿಶೇಷ

ಬೆಂಗಳೂರು(ಏ.28): ಲಾಕ್‌ಡೌನ್ ಸಂದರ್ಭ ಕೆಲಸ, ಸಂಬಳವಿಲ್ಲದೆ ಜನ ಕಷ್ಟಪಡುತ್ತಿರುವ ಸಂದರ್ಭದಲ್ಲಿ ಬಡಜನರಿಗಾಗಿ ದಿನಸಿ ಕಿಟ್‌ಗಳನ್ನು ವಿತರಿಸಲಾಗಿದೆ. ಬೆಂಗಳೂರಿನ ಗಿರಿನಗರದಲ್ಲಿ ಬಡಜನರಿಗೆ ಕಿಟ್ ವಿತರಿಸಲಾಗಿದೆ. ಲಾಕ್‌ಡೌನ್‌ನಿಂದಾಗಿ ಆದಾಯವಿಲ್ಲದೆ ಕಷ್ಟಪಡುತ್ತಿರುವ ಬಡ ಜನರಿಗೆ ಗಿರಿನಗರದಲ್ಲಿ ಆಹಾರದ ಕಿಟ್‌ಗಳನ್ನು ವಿತರಿಸಲಾಯಿತು.

ಕಲ್ಪವೃಕ್ಷ ಕೋ ಆಪರೇಟಿವ್ ಸೊಸೈಟಿ ಹಾಗೂ ಪ್ರಮತಾ ಡೆವಲಪರ್ಸ್ ವತಿಯಿಂದ ಆಹಾರದ ಕಿಟ್‌ಗಳನ್ನು ಒದಗಿಸಲಾಗಿತ್ತು. ಲಾಕ್‌ಡೌನ್ ಸಂದರ್ಭ ಕೆಲಸ, ಸಂಬಳವಿಲ್ಲದೆ ಜನ ಕಷ್ಟಪಡುತ್ತಿರುವ ಸಂದರ್ಭದಲ್ಲಿ ಬಡಜನರಿಗಾಗಿ ದಿನಸಿ ಕಿಟ್‌ಗಳನ್ನು ವಿತರಿಸಲಾಗಿದೆ.

ಕೊರೊನಾ ಟೆನ್ಷನ್‌ನಿಂದ ಕರ್ನಾಟಕಕ್ಕೆ ಮುಕ್ತಿ?

ಅಕ್ಕಿ, ಬೇಳೆ, ಅಡುಗೆ ಎಣ್ಣೆ, ಸಕ್ಕರೆ ಸೇರಿದಂತೆ ಅಗತ್ಯವಸ್ತುಗಳನ್ನು ಒಳಗೊಂಡಿದ್ದ ಕಿಟ್‌ಗಳನ್ನು ಬಡ ಜನರಿಗೆ ವಿತರಿಸಲಾಯಿತು. ಮಹಿಳೆಯರಿಗಾಗಿ ಸ್ಯಾನಿಟರಿ ಪ್ಯಾಡ್‌ಗಳನ್ನು ಒದಗಿಸಲಾಗಿತ್ತು. ಜನರು ಸಾಮಾಜಿಕ ಅಂತರ ಕಾಯ್ದುಕೊಂಡು ಕಿಟ್‌ಗಳನ್ನು ಪಡೆದುಕೊಂಡರು.