ಹಬ್ಬದ ದಿನವೇ ಹೂವಿನ ಬೆಲೆ ಕುಸಿತ, ಲಾಭದ ನಿರೀಕ್ಷೆಯಲ್ಲಿ ಬಂದ ರೈತರಿಗೆ ಶಾಕ್
ಸಂಕ್ರಾಂತಿ ದಿನ ಹೂವಿಗೆ ಚೆನ್ನಾಗಿ ಬೆಲೆ ಸಿಗುತ್ತೆ ಎಂಬ ನಿರೀಕ್ಷೆಯಲ್ಲಿ ಮಾರುಕಟ್ಟೆಗೆ ಬಂದ ರೈತರು ನಿರಾಶರಾಗಿದ್ದಾರೆ. ಚಿಕ್ಕಬಳ್ಳಾಪುರ ಎಪಿಎಂಸಿ ಮಾರುಕಟ್ಟೆಯಲ್ಲಿ ಹೂವನ್ನು ಮಾರಲು ಬಂದ ರೈತರು ಸಪ್ಪೆ ಮೋರೆ ಹಾಕುವಂತಾಗಿದೆ.
ಚಿಕ್ಕಬಳ್ಳಾಪುರ(ಜ.15): ಸಂಕ್ರಾಂತಿ ದಿನ ಹೂವಿಗೆ ಚೆನ್ನಾಗಿ ಬೆಲೆ ಸಿಗುತ್ತೆ ಎಂಬ ನಿರೀಕ್ಷೆಯಲ್ಲಿ ಮಾರುಕಟ್ಟೆಗೆ ಬಂದ ರೈತರು ನಿರಾಶರಾಗಿದ್ದಾರೆ. ಚಿಕ್ಕಬಳ್ಳಾಪುರ ಎಪಿಎಂಸಿ ಮಾರುಕಟ್ಟೆಯಲ್ಲಿ ಹೂವನ್ನು ಮಾರಲು ಬಂದ ರೈತರು ಸಪ್ಪೆ ಮೋರೆ ಹಾಕುವಂತಾಗಿದೆ. ಹಬ್ಬದ ದಿನವೇ ದಿಢೀರ್ ಬೆಲೆ ಕುಸಿದಿದೆ.
ಗುಲಾಬಿ ಹೂವಿಗೆ ಫೇಮಸ್ ಆಗಿರುವ ಚಿಕ್ಕಬಳ್ಳಾಪುರ ಮಾರುಕಟ್ಟೆಯಲ್ಲಿ ಮಂಗಳವಾರ ಕೆಜಿ ಗುಲಾಬಿಗೆ 150ರಿಂದ 160 ರೂಪಾಯಿ ಬೆಲೆ ಇತ್ತು. ಆದರೆ ಹಬ್ಬದ ದಿನ 40 ರಿಂದ 50 ರೂಪಾಯಿಗೆ ಇಳಿದಿದೆ.
ಸಂಕ್ರಾಂತಿ ಸಂಭ್ರಮ: ರೈತರಿಗೆ ಉಡುಗೊರೆ
ಹಬ್ಬದ ದಿನ ಹೆಚ್ಚು ಹೂವನ್ನು ಮಾರಿ ಲಾಭ ಗಳಿಸಲು ಬಂದ ರೈತರು ದಿಢೀರ್ ಬೆಲೆ ಕುಸಿತದಿಂದ ಆತಂಕಕ್ಕೊಳಗಾಗಿದ್ದಾರೆ. ಕಳೆದ ಮೂರು ನಾಲ್ಕು ದಿನಗಳಲ್ಲಿ ಗುಲಾಬಿಯ ಬೆಲೆ ಇಷ್ಟು ಇಳಿದಿರಲಿಲ್ಲ. ಆದರೆ ದಿಢೀರ್ ಆಗಿ ಹಬ್ಬದ ದಿನವೇ ಬೆಲೆ ಕುಸಿದಿರುವುದು ರೈತರಿಗೆ ನಷ್ಟವುಂಟು ಮಾಡಿದೆ.