Asianet Suvarna News Asianet Suvarna News

ಸಾಲ ತೀರಿಸಲು 'ಮನೆ ಮಕ್ಕಳ' ಮಾರಬೇಕಾಗಿದೆ ಸಿಎಂ ತವರಿನ ರೈತರು!

Jul 30, 2021, 7:43 PM IST

ಹಾವೇರಿ(ಜು. 30)  ಪ್ರವಾಹದಿಂದ ರೈತನ ಬದುಕು ದುಸ್ತರವಾಗಿದೆ.ಜಮೀನುಗಳು ಜಲಾವೃತವಾಗಿದ್ದು, ಸಂಪೂರ್ಣ ಬೆಳೆ ಹಾನಿಯಾಗಿರುವ ರೈತ ಸಂಕಟಕ್ಕೆ ಸಿಲುಕಿದ್ದಾನೆ. ಈಗಾಗಲೇ ಸಾಲ ಮಾಡಿ ಬಿತ್ತನೆ ಮಾಡಿದ್ದ ರೈತನಿಗೆ ಸಾಲ ತೀರಿಸುವ ಟೆನ್ಷನ್. ಹೀಗಾಗಿ ಮನೆ ಮಕ್ಕಳಂತಿದ್ದ ಎತ್ತುಗಳನ್ನು ರೈತರು ಮಾರುತ್ತಿದ್ದಾರೆ.

'ಹೊಸ ಸಿಎಂ ಬೊಮ್ಮಾಯಿ ಮುಂದೆ ನೂರೆಂಟು ಸವಾಲುಗಳು'

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತವರು ಜಿಲ್ಲೆ ಹಾವೇರಿ ರೈತರ ಗೋಳಿನ ಕಥೆ ಇದು. ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು ಅನಿವಾರ್ಯವಾಗಿ ತಮ್ಮ ಗೆಳೆಯನನ್ನೇ ಮಾರುವ ಪರಿಸ್ಥಿತಿಗೆ ಬಂದಿದ್ದಾರೆ.