Asianet Suvarna News Asianet Suvarna News

ಇಂಡಿಗೋದಲ್ಲಿ ಬಾಂಬ್ ಇದೆ ಎಂದು ಕರೆ ಮಾಡಿದ್ದ ಆದಿತ್ಯ..!

Jan 23, 2020, 2:22 PM IST

ಮಂಗಳೂರು(ಜ.23): ಬಾಂಬರ್ ಆದಿತ್ಯ ರಾವ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಮಂಗಳೂರಿನ ಬಜ್ಪೆ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಿಸಲಾಗಿದೆ. ಮಂಗಳೂರು ವಿಮಾನ ನಿಲ್ದಾಣದಲ್ಲಿ ಆದಿತ್ಯರಾವ್ ವಿರುದ್ಧ ಮತ್ತೊಂದು‌ FIR ದಾಖಲಿಸಲಾಗಿದೆ.

ಬಾಂಬ್ ತಯಾರಿ ಬಗ್ಗೆ ರಿಸರ್ಚ್ ಮಾಡಿದ್ದ ಆದಿತ್ಯ, ಟೆಕ್ನಿಕಲಿ ಎಕ್ಸ್‌ಪರ್ಟ್

ಇಂಡಿಗೋ ವಿಮಾನದಲ್ಲಿ ಬಾಂಬ್ ಇರಿಸಿದ್ದಾಗಿ ಆದಿತ್ಯ ರಾವ್ ಹುಸಿ ಕರೆ ಮಾಡಿದ್ದ. ಜ.20ರ ಮಧ್ಯಾಹ್ನ 2.30ಕ್ಕೆ ಆದಿತ್ಯ ರಾವ್ ಕರೆ ಮಾಡಿದ್ದ. ಇಂಡಿಗೋ ಮ್ಯಾನೇಜರ್‌ಗೆ ಕರೆ ಮಾಡಿದ್ದ ಆದಿತ್ಯರಾವ್ ವಿಮಾನದಲ್ಲಿ‌ ಬಾಂಬ್ ಇಟ್ಟಿರೋದಾಗಿ ಬೆದರಿಸಿದ್ದ. ಈ ಹಿನ್ನಲೆ ಯಲ್ಲಿ ಇಂಡಿಗೋ ಅಧಿಕಾರಿಗಳು ದೂರು ದಾಖಲಿಸಿದ್ದರು.

ಕೆಲಸ ಸಿಗುವ ವಿಚಾರವಾಗಿ ಖಿನ್ನತೆಗೊಳಗಾಗಿದ್ದ ಆದಿತ್ಯ ರಾವ್ ಮುಖ್ಯವಾಗಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳನ್ನೇ ಟಾರ್ಗೆಟ್ ಮಾಡಿರುವುದಾಗಿ ತನಿಖೆಯ ಸಂದರ್ಭ ಹೇಳಿದ್ದಾನೆ.

ಬಾಂಬ್ ಇಟ್ಟಿದ್ದಕ್ಕೆ ಕಾರಣ ಕೊಟ್ಟ ಆದಿತ್ಯ ರಾವ್, ಉತ್ತರಕ್ಕೆ ಪೊಲೀಸರೇ ಶಾಕ್‌