Asianet Suvarna News Asianet Suvarna News

ಕರಡಿ- ನಾಯಿ ನಡುವೆ ಕಾದಾಟ: ದೃಶ್ಯ ಮೊಬೈಲ್‌ನಲ್ಲಿ ಸೆರೆ

ರೈತರ ಜಮೀನಿಗೆ ಬಂದಿದ್ದ ಕರಡಿಯನ್ನು ನಾಯಿಯೊಂದು ಬೆನ್ನತ್ತಿ ಓಡಿಸಿದ ಘಟನೆ ಕೊಪ್ಪಳದಲ್ಲಿ ನಡೆದಿದೆ.
 

First Published Jun 30, 2023, 3:59 PM IST | Last Updated Jun 30, 2023, 3:59 PM IST

ಕೊಪ್ಪಳ: ರೈತರ ಜಮೀನಿಗೆ‌ ನುಗ್ಗಿದ ಕರಡಿ ಮರಿಯನ್ನು ಸಾಕಿದ ನಾಯಿ ಬೆನ್ನತ್ತಿದ ಘಟನೆ ಕೊಪ್ಪಳದಲ್ಲಿ ನಡೆದಿದೆ. ಕರಡಿ ಹಾಗೂ ನಾಯಿಯ ಈ ರಣರೋಚಕ ಕಾದಾಟ ಮೊಬೈಲ್‌ನಲ್ಲಿ ಸೆರೆಯಾಗಿದೆ.ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನ ಗಂಗನಾಳ ಗ್ರಾಮದಲ್ಲಿ ನಾಯಿ ಮತ್ತು ಕರಡಿ ನಡುವೆ ಕಾದಾಟ ನಡೆದಿದೆ. ಗ್ರಾಮದಲ್ಲಿ ಕರಡಿಗಳು ಕಾಣಿಸಿಕೊಂಡಿದ್ದರಿಂದ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ. ನಾಯಿ ದಾಳಿಗೆ ಕರಡಿ ಓಡಿ ಹೋಗಿದೆ. ಜಮೀನಿನಲ್ಲಿದ್ದ ಕಲ್ಲಂಗಡಿ ಹಣ್ಣು ತಿನ್ನಲು ಕರಡಿ ಬಂದಿತ್ತು ಎಂದು ಹೇಳಲಾಗುತ್ತಿದೆ. 

ಇದನ್ನೂ ವೀಕ್ಷಿಸಿ: ‘ದಿ ಕೇರಳ ಸ್ಟೋರಿ’ ನಟಿ ಮತಾಂತರಗೊಂಡರಾ?: ಅದಾ ಶರ್ಮಾ ಫೋಟೋ ಹಿಂದಿನ ಅಸಲಿಯತ್ತೇನು ?