Asianet Suvarna News Asianet Suvarna News

ಬೆಲೆ ಕುಸಿತ, ಕೊರೋನಾ ಸಂಕಷ್ಟ ನಡುವೆ ರೈತರಿಗೆ ಬ್ಯಾಂಕ್‌ನಿಂದಲೂ ಕಿರುಕುಳ!

Oct 9, 2021, 5:28 PM IST

ಹಾಸನ (ಅ. 09):  ಬೆಲೆ ಕುಸಿತ, ಕೊರೋನಾ ಸಂಕಷ್ಟ ನಡುವೆ ರೈತರಿಗೆ ಬ್ಯಾಂಕ್‌ನಿಂದಲೂ ಕಿರುಕುಳ! ಪಿಂಚಣಿ, ಹಾಲಿನ ಹಣವನ್ನು ಸಾಲಕ್ಕೆ ಜಮಾ ಮಾಡಿಕೊಳ್ಳುತ್ತಿರುವ ಬ್ಯಾಂಕ್ ಕ್ರಮಕ್ಕೆ ದೊಡ್ಡಕರಡೇವು ಗ್ರಾಮದ ರೈತರು ಆಕ್ರೋಶ ವ್ಯಕ್ತಪಡಿಸಿದ್ಧಾರೆ. ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದಾರೆ.  ರೈತರು ಮತ್ತು ಬ್ಯಾಂಕ್ ಸಿಬ್ಬಂದಿ ನಡುವೆ ಮಾತಿನ ಚಕಮಕಿ ನಡೆದಿದೆ. 

ಈ ಹೊಟೇಲ್‌ನಲ್ಲಿ ದಲಿತರಿಗೆ ಪ್ರತ್ಯೇಕ ತಟ್ಟೆ, ದೂರ ಇರು ದಲಿತ ಅಂತಾರೆ ಮಂದಿ!

'ಕೊರೋನಾ ಸಂಕಷ್ಟ ಸಮಯದಲ್ಲಿ ಹಾಲಿನ ಹಣ, ಪಿಂಚಣಿ ಹಣ ರೈತರ ಕೈ ಹಿಡಿದಿದೆ. ರೈತರು ಹಾಲಿನ ಹಣದಿಂದಲೇ ಜೀವನ ನಡೆಸುತ್ತಿದ್ದಾರೆ. ಡೈರಿಗೆ ಹಾಲು ಹಾಕಿ ಬಂದ ಹಣವನ್ನು ಬ್ಯಾಂಕ್‌ನವರು ಸಾಲಕ್ಕೆ ಜಮಾ ಮಾಡುತ್ತಿದ್ದಾರೆ. ಹೀಗಾದರೆ ನಾವು ಜೀವನ ನಡೆಸೋದು ಹೇಗೆಂದು ರೈತರು ಪ್ರಶ್ನಿಸಿದ್ದಾರೆ.  ಹಾಲಿನ ಹಣ, ಪಿಂಚಣಿ ಹಣ ಸಾಲಕ್ಕೆ ಜಮಾ ಮಾಡದಂತೆ ಬ್ಯಾಂಕ್‌ಗಳಿಗೆ ಸೂಚಿಸಬೇಕು ಎಂದು ಒತ್ತಾಯಿಸಿದ್ದಾರೆ.