Asianet Suvarna News Asianet Suvarna News

ಹುಬ್ಬಳ್ಳಿ: ಲಾಕ್‌ಡೌನ್‌ ನಿಯಮ ಉಲ್ಲಂಘಿಸಿ ಅದ್ಧೂರಿ ಹುಟ್ಟುಹಬ್ಬ ಆಚರಿಸಿದ ಮುಖಂಡ

* ಮಾಜಿ ಪಾಲಿಕೆ ಸದಸ್ಯ ಅಲ್ತಾಫ್ ಕಿತ್ತೂರರಿಂದ ಬರ್ತಡೇ ಸೆಲೆಬ್ರೇಶನ್
* ಕಠಿಣ ಲಾಕ್ ಡೌನ್ ಉಲ್ಲಂಘಿಸಿ ಹುಟ್ಟುಹಬ್ಬ ಆಚರಿಸಿದ ಮುಖಂಡ
* ಹುಬ್ಬಳ್ಳಿ ನಗರದಲ್ಲಿ ನಡೆದ ಘಟನೆ 
 

ಹುಬ್ಬಳ್ಳಿ(ಜೂ.02): ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆಯ ಮಾಜಿ ಕಾರ್ಪೋರೆಟರ್‌ ಅಲ್ತಾಫ್ ಕಿತ್ತೂರ ಅವರು ಕಠಿಣ ಲಾಕ್‌ಡೌನ್‌ ನಿಯಮ ಉಲ್ಲಂಘಿಸಿ ಅದ್ಧೂರಿಯಾಗಿ ಹುಟ್ಟುಹಬ್ಬ ಆಚರಣೆ ಮಾಡಿದ್ದಾರೆ. ನೂರಾರು ಜನರನ್ನು ಸೇರಿಸಿ‌‌ ಹುಟ್ಟುಹಬ್ಬವನ್ನ ಆಚರಿಸಿಕೊಂಡಿದ್ದಾರೆ. ನಗರದ ಹಳೆ ಹುಬ್ಬಳ್ಳಿಯ ಮಸೀದಿಯಲ್ಲಿ ಬರ್ತಡೇ ಆಚರಿಸಲಾಗಿದೆ ಎಂದು ತಿಳಿದು ಬಂದಿದೆ. ಮಾಸ್ಕ್ ಹಾಕದೇ ಸಾಮಾಜಿಕ ಅಂತರ ಕಾಪಾಡದೇ ಹುಟ್ಟುಹಬ್ಬವನ್ನ ಆಚರಣೆ‌ ಮಾಡಲಾಗಿದೆ. ನೂರಾರು ಬೆಂಬಲಿಗರ ಮಧ್ಯೆ ಅಲ್ತಾಫ್ ಕಿತ್ತೂರ ಕೇಕ್ ಕಟ್ ಮಾಡಿದ್ದಾರೆ. 

ಶೇ. 64 ರಷ್ಟು ಹಳ್ಳಿಗಳಿಗೆ ಕೊರೋನಾ ಸೋಂಕು, ಈ 2 ಜಿಲ್ಲೆಗಳಲ್ಲೇ ಹೆಚ್ಚು ಸೋಂಕು

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ನ್ಯೂಸ್‌ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona
 

Video Top Stories