ಕೊಡಗಿನ ದುಬಾರೆಗೆ ಬರುವ ಪ್ರವಾಸಿಗರಿಗೆ ಸದ್ಯದಲ್ಲೇ ಸಿಗಲಿದೆ ಸಫಾರಿ ಮಜಾ..!
ಕೊಡಗಿನ ಪ್ರಮುಖ ಪ್ರವಾಸಿ ತಾಣ ದುಬಾರೆಯಲ್ಲಿ ಬೋಟಿಂಗ್, ರ್ಯಾಫ್ಟಿಂಗ್.. ಸಾಕಾನೆಗಳನ್ನ ನೋಡಿ ಎಂಜಾಯ್ ಮಾಡ್ತಿದ್ದ ಪ್ರವಾಸಿಗರಿಗೆ ಇದೀಗ ಮತ್ತೊಂದು ಖುಷಿ ವಿಷ್ಯ... ಕೇವಲ ಸಾಕಾನೆಗಳನ್ನ ನೋಡಿ ಎಂಜಾಯ್ ಮಾಡ್ತಿದ್ದ ಪ್ರವಾಸಿಗರಿಗೆ ಆನೆ ಸಫಾರಿ ಸಿಕ್ರೆ ಹೇಗಿರುತ್ತೆ?
ಕೊಡಗು (ಜ. 04): ಪ್ರಮುಖ ಪ್ರವಾಸಿ ತಾಣ ದುಬಾರೆಯಲ್ಲಿ ಬೋಟಿಂಗ್, ರ್ಯಾಫ್ಟಿಂಗ್.. ಸಾಕಾನೆಗಳನ್ನ ನೋಡಿ ಎಂಜಾಯ್ ಮಾಡ್ತಿದ್ದ ಪ್ರವಾಸಿಗರಿಗೆ ಇದೀಗ ಮತ್ತೊಂದು ಖುಷಿ ವಿಷ್ಯ... ಕೇವಲ ಸಾಕಾನೆಗಳನ್ನ ನೋಡಿ ಎಂಜಾಯ್ ಮಾಡ್ತಿದ್ದ ಪ್ರವಾಸಿಗರಿಗೆ ಆನೆ ಸಫಾರಿ ಸಿಕ್ರೆ ಹೇಗಿರುತ್ತೆ.?
ಎಮ್ಮೆಗಳಿಗೂ ಇಲ್ಲಿದೆ ಬ್ಯೂಟಿ ಪಾರ್ಲರ್; ಸ್ನಾನ, ಹೇರ್‌ಕಟ್, ಮಸಾಜ್ ಫ್ರೀ...ಫ್ರೀ..!
ಇಂತಹದ್ದೇ ಒಂದು ಚಿಂತನೆ ಇದೀಗ ನಡೆಯುತ್ತಿದೆ. ಶಿಬಿರದಲ್ಲಿ 30 ಸಾಕಾನೆಗಳಿವೆ. ರಾಜ್ಯದ ವಿವಿಧ ಕಡೆಗಳಲ್ಲಿ ಸೆರೆ ಹಿಡಿದಿರುವ ಪುಂಡಾನೆಗಳನ್ನ ಇಲ್ಲಿ ಪಳಗಿಸಿ, ಒಂದಿಷ್ಟು ಕೆಲಸ ಮಾಡಿಸಲಾಗುತ್ತೆ. ದಸರಾ ಆನೆಗಳಾದ ಗೋಪಿ, ಧನಂಜಯ, ವಿಕ್ರಮ,ಕಾವೇರಿ, ವಿಜಯ, ಆನೆಗಳ ಜೊತೆಗೆ ರಾಮು, ಲಕ್ಷ್ಮಿ, ರಂಜನ್,ಸುಗ್ರೀವ, ಈಶ್ವರ ಆನೆಗಳಿವೆ. ಸರಿಯಾದ ದೇಹ ದಂಡನೆ ಇಲ್ಲದ ಕಾರಣ ಅವಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆಯಂತೆ. ಸಫಾರಿ ಮಾಡೋದ್ರಿಂದ ಒಂದೇ ಕಡೆ ಇರೋ ಆನೆಗಳಿಗೆ ಓಡಾಡಿದ ಹಾಗೆ ಆಗುತ್ತೆ. ಆರೋಗ್ಯ ಕೂಡ ಉತ್ತಮ ಆಗಿರುತ್ತೆ ಅನ್ನೋದು ಅರಣ್ಯ ಇಲಾಖೆಯ ಕಲ್ಪನೆ. ಹೀಗಾಗಿ ಶಿಬಿರದಲ್ಲಿ ಸಫಾರಿ ನಡೆಸಲು ರಾಜ್ಯ ಸರ್ಕಾರದ ಅನುಮತಿ ಕೇಳಿದೆ. ಸರ್ಕಾರ ಅಸ್ತು ಅಂದರೆ ಪ್ರವಾಸಿಗರಿಗೆ ಸಫಾರಿಯ ಮಜಾ ಕೂಡಾ ದುಬಾರೆಯಲ್ಲಿ ಸಿಗಲಿದೆ.