Asianet Suvarna News Asianet Suvarna News

ನೀರಿನ ತೊಟ್ಟಿಗೆ ಬಿದ್ದ ಮರಿಯಾನೆ! ಅಧಿಕಾರಿಗಳ ಸಮಯಪ್ರಜ್ಞೆಯಿಂದ ರಕ್ಷಣೆ

Nov 22, 2020, 3:46 PM IST

ಮಂಡ್ಯ(ನ.22): ನೀರಿನ ತೊಟ್ಟಿಗೆ ಬಿದ್ದು ಮೂಕರೋಧನೆ ಅನುಭವಿಸುತ್ತಿದ್ದ ಆನೆ ಮರಿಯನ್ನ ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಿಸಿದ ಘಟನೆ ಜಿಲ್ಲೆಯ ಮಳವಳ್ಳಿ ತಾಲೂಕಿನ ಮಣಿಗಾರನಕಟ್ಟೆ ಅರಣ್ಯ ಪ್ರದೇಶದಲ್ಲಿ ಇಂದು(ಭಾನುವಾರ) ನಡೆದಿದೆ. ಕಳೆದ ರಾತ್ರಿ ಕಾಡಾನೆಗಳ ಹಿಂಡಿನೊಂದಿಗೆ ಬಂದಿದ್ದ ಮರಿ ಆನೆ, ನೀರು ಕುಡಿಯುವ ಸಂದರ್ಭದಲ್ಲಿ ತೊಟ್ಟಿಗೆ ಬಿದ್ದು ಸಂಕಟ ಅನುಭವಿಸಿತ್ತು. 

ಶಬರಿಮಲೆ ಯಾತ್ರಿಗಳಿಂದ ಲೂಟಿ ಮಾಡ್ತಿರೋ ಕೇರಳ ಪೊಲೀಸರು...!

ಪ್ರಾಣಿಗಳು ನೀರು ಕುಡಿಯಲೆಂದು ನಿರ್ಮಿಸಿದ್ದ ಸೀಮೆಂಟ್ ತೊಟ್ಟಿಗೆ ಬಿದ್ದ ಆನೆ ಮರಿ ತೊಟ್ಟಿಯಿಂದ ಮೇಲೆ ಬರಲಾರದೆ ರೋಧಿಸುತ್ತಿತ್ತು. ತೊಟ್ಟಿಯಲ್ಲಿ ಮರಿ ಸಿಲುಕಿದ್ದರಿಂದ ಉಳಿದ ಆನೆಗಳು ಘೀಳಿಡುತ್ತಿದ್ದವು. ಆನೆಗಳು ಕೂಗುತ್ತಿದ್ದ ಶಬ್ದ ಕೇಳಿ ಬೆಳಿಗ್ಗೆ ಸ್ಥಳಕ್ಕೆ ಭೇಟಿ ನೀಡಿ ಅಧಿಕಾರಿಗಳು ಕಾರ್ಯಾಚರಣೆ ನಡೆಸುವ ಮೂಲಕ ಮರಿ ಆನೆಯನ್ನ ರಕ್ಷಿಸಿದ್ದಾರೆ.