ಅಟ್ಟಾಡಿಸಿ ದಾಳಿ ಮಾಡಿದ ಆನೆ, ವ್ಯಕ್ತಿ ಗಂಭೀರ
ಆನೆ ದಾಳಿಯಿಂದ ವ್ಯಕ್ತಿ ಗಂಭೀರವಾಗಿ ಗಾಯಗೊಂಡ ಘಟನೆ ತುಮಕೂರಿನಲ್ಲಿ ನಡೆದಿದೆ. ತುಮಕೂರು ಗ್ರಾಮಾಂತರ ಭಾಗದ ಹಿರೇಹಳ್ಳಿಯಲ್ಲಿ ಘಟನೆ ನಡೆದಿದ್ದ, ಒಂಟಿ ಸಲಗ ಏಕಾಏಕಿ ದಾಳಿ ನಡೆಸಿದೆ. ಇಲ್ಲಿದೆ ವಿಡಿಯೋ
ತುಮಕೂರು(ಮಾ.09): ಆನೆ ದಾಳಿಯಿಂದ ವ್ಯಕ್ತಿ ಗಂಭೀರವಾಗಿ ಗಾಯಗೊಂಡ ಘಟನೆ ತುಮಕೂರಿನಲ್ಲಿ ನಡೆದಿದೆ. ತುಮಕೂರು ಗ್ರಾಮಾಂತರ ಭಾಗದ ಹಿರೇಹಳ್ಳಿಯಲ್ಲಿ ಘಟನೆ ನಡೆದಿದ್ದ, ಒಂಟಿ ಸಲಗ ಏಕಾಏಕಿ ದಾಳಿ ನಡೆಸಿದೆ.
ದಾಸಯ್ಯ(೬೫) ಗಂಭೀರಗಾಯಗೊಂಡಿದ್ದಾರೆ. ಹೊಸದುರ್ಗದಿಂದ ಬಂದಿರುವ ಒಂಟಿಸಲಗ ಮನೆಯ ಬಳಿಯಲ್ಲಿಯೇ ಇದ್ದ ವೃದ್ಧನ ಮೇಲೆ ದಾಳಿ ನಡೆಸಿದೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿದ್ದಾರೆ. ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.Elephant attacks farmer in Tumakur