Asianet Suvarna News Asianet Suvarna News

Big 3 Impact: ಗದಗದ ಡೋಣಿ ಗ್ರಾಮದಲ್ಲಿ ರೋಗಿಗಳ ತಪಾಸಣೆ

ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಡೋಣಿ ಗ್ರಾಮದಲ್ಲಿ ಕಾಣಿಸಿಕೊಂಡಿದ್ದ ಚಿಕೂನ್‌ ಗುನ್ಯಾ| ಈ ಗ್ರಾಮದ ಕಡೆಗೆ ತೆಲ ಹಾಕದ ಆರೋಗ್ಯಾಧಿಕಾರಿಗಳು,ರಾಜಕಾರಣಿಗಳು| ಈ ಬಗ್ಗೆ ಸುವರ್ಣ ನ್ಯೂಸ್ ಸುದ್ದಿ ಪ್ರಸಾರ ಮಾಡಿತ್ತು| ವರದಿಯ ಬಳಿಕ ಎಚ್ಚೆತ್ತ ಅಧಿಕಾರಿಗಳು| 

ಗದಗ(ಜ.29): ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಡೋಣಿ ಗ್ರಾಮದಲ್ಲಿ ಚಿಕೂನ್‌ ಗುನ್ಯಾ ರೋಗ ಕಾಣಿಸಿಕೊಂಡು ಗ್ರಾಮಸ್ಥರ ತಲೆನೋವಿಗೆ ಕಾರಣವಾಗಿತ್ತು. ಗ್ರಾಮದ ಬಹುತೇಕ ಎಲ್ಲ ಮನೆಗಳಲ್ಲೂ ಒಬ್ಬರಿಂದ ಇಬ್ಬರಿಗೆ ಚಿಕೂನ್‌ ಗುನ್ಯಾ ಕಾಣಿಸಿಕೊಂಡಿತ್ತು. ಆದರೆ, ಇಷ್ಟಲ್ಲಾ ಆದರೂ ಯಾವೊಬ್ಬ ಆರೋಗ್ಯಾಧಿಕಾರಿಗಳು ಬಂದು ಚಿಕಿತ್ಸೆ ನೀಡಿರಲಿಲ್ಲ.

ಊರಿಗೆ ಊರೇ ಚಿಕೂನ್ ಗುನ್ಯಾ, ಗೋಳು ಕೇಳೋರು ಯಾರಣ್ಣ?

ಈ ಬಗ್ಗೆ ಸುವರ್ಣ ನ್ಯೂಸ್‌ ವರದಿಯನ್ನ ಪ್ರಸಾರ ಮಾಡಿತ್ತು. ಈ ವರದಿ ನೋಡಿ ಆರೋಗ್ಯಾಧಿಕಾರಿಗಳು ಕಳೆದ ಮೂರು ದಿನಗಳಿಂದ ಡೋಣಿ ಗ್ರಾಮದಲ್ಲಿ ಬೀಡುಬಿಟ್ಟು ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಹೀಗಾಗಿ ಸುವರ್ಣ ನ್ಯೂಸ್‌ಗೆ ಗ್ರಾಮಸ್ಥರು ಧನ್ಯವಾದ ತಿಳಿಸಿದ್ದಾರೆ. ಸುವರ್ಣ ನ್ಯೂಸ್‌ ಸುದ್ದಿ ಪ್ರಸಾರ ಮಾಡಿದ್ದರಿಂದಲೇ ನಮ್ಮೂರಿಗೆ ವೈದ್ಯರು ಆಗಮಿಸಿದ್ದಾರೆ ಎಂದು ಹೇಳಿದ್ದಾರೆ. 
 

Video Top Stories