ವಿನೂತನ ರೀತಿಯಲ್ಲಿ ರೈತರ ದಿನ ಆಚರಿಸಿದ ಕೈ ಕಾರ್ಯಕರ್ತೆಯರು!
ಹೊಲದಲ್ಲಿ ಕೆಲಸ ಮಾಡುತ್ತಿರೋ ಮಹಿಳೆಯರು; ಬುಟ್ಟಿಯಲ್ಲಿ ಟೊಮ್ಯಾಟೋ ಕಿತ್ತಿ ಹಾಕಿಕೊಳ್ಳುತ್ತಿರೋ ಯುವತಿಯರು; ಅಡುಗೆ ಮಾಡುತ್ತಿರೋ ಅಜ್ಜಿಯಂದಿರು. ಹೀಗೆ ಈ ಎಲ್ಲ ಕೆಲಸ ಮಾಡುತ್ತಿರೋ ಇವರನ್ನು ನೋಡಿದರೆ ಇದೆಲ್ಲ ಮಾಡುತ್ತಿರೋದು ರೈತ ಮಹಿಳೆಯರು ಅನ್ನಿಸುತ್ತೆ. ಆದರೆ ಅಸಲಿಗೆ ಇವರು ರೈತ ಮಹಿಳೆಯರಲ್ಲ!
ಧಾರವಾಡ (ಡಿ. 25): ಹೊಲದಲ್ಲಿ ಕೆಲಸ ಮಾಡುತ್ತಿರೋ ಮಹಿಳೆಯರು; ಬುಟ್ಟಿಯಲ್ಲಿ ಟೊಮ್ಯಾಟೋ ಕಿತ್ತಿ ಹಾಕಿಕೊಳ್ಳುತ್ತಿರೋ ಯುವತಿಯರು; ಅಡುಗೆ ಮಾಡುತ್ತಿರೋ ಅಜ್ಜಿಯಂದಿರು. ಹೀಗೆ ಈ ಎಲ್ಲ ಕೆಲಸ ಮಾಡುತ್ತಿರೋ ಇವರನ್ನು ನೋಡಿದರೆ ಇದೆಲ್ಲ ಮಾಡುತ್ತಿರೋದು ರೈತ ಮಹಿಳೆಯರು ಅನ್ನಿಸುತ್ತೆ. ಆದರೆ ಅಸಲಿಗೆ ಇವರು ರೈತ ಮಹಿಳೆಯರಲ್ಲ!
ಬದಲಿಗೆ ಕಾಂಗ್ರೆಸ್ ಕಾರ್ಯಕರ್ತೆಯರು! ಹೌದು, ರಾಷ್ಟ್ರೀಯ ರೈತ ದಿನಾಚರಣೆಯ ಅಂಗವಾಗಿ ಕಾಂಗ್ರೆಸ್ ನ ಧಾರವಾಡ ಗ್ರಾಮೀಣ ಮಹಿಳಾ ಘಟಕದ ವತಿಯಿಂದ ಮಹಿಳಾ ಕಾಂಗ್ರೆಸ್ 'ಕಾಂಗ್ರೆಸ್ ನಡಿಗೆ, ರೈತರ ಕಡೆಗೆ' ಅನ್ನುವ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಧಾರವಾಡದ ನವಲೂರು ಗ್ರಾಮದ ಓರ್ವ ರೈತರ ತೋಟದಲ್ಲಿ ಕಾಂಗ್ರೆಸ್ ಕಾರ್ಯಕರ್ತೆಯರು ದಿನವಿಡೀ ಕೆಲಸ ಮಾಡೋ ಮೂಲಕ ಈ ದಿನವನ್ನು ತುಂಬಾನೇ ಡಿಫರೆಂಟ್ ಆಗಿ ಆಚರಿಸಿದರು!