Asianet Suvarna News Asianet Suvarna News

ಸರ್ಕಾರಿ ಬಸ್‌ಗಳು ಫುಲ್​ ರಶ್ : ವಿಂಡೋ ಸೀಟ್ ಕಾಯ್ದಿರಿಸಲು ಕಿಟಕಿ ರಾಡ್ ಕಿತ್ತ ಪ್ರಯಾಣಿಕರು !

ಧರ್ಮಸ್ಥಳ ಬಸ್ ನಿಲ್ದಾಣದಲ್ಲಿ ವಿಂಡೋ ಸೀಟ್‌ ಕಾಯ್ದಿರಿಸಲು ಬಸ್‌ನ ಕಿಟಿಕಿ ರಾಡ್‌ ಕಿತ್ತಿರುವ ಘಟನೆ ನಡೆದಿದೆ.
 

First Published Jun 17, 2023, 2:47 PM IST | Last Updated Jun 17, 2023, 2:47 PM IST

ದಕ್ಷಿಣ ಕನ್ನಡ: ಮಹಿಳೆಯರಿಗೆ ಸರ್ಕಾರಿ ಬಸ್‌ನಲ್ಲಿ ಉಚಿತ ಪ್ರಯಾಣ ಘೋಷಣೆ ಮಾಡಿದ ಹಿನ್ನೆಲೆ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಬಸ್ ಹತ್ತಲು ಪ್ರಯಾಣಿಕರ ಹರ ಸಾಹಸ ಪಡುವಂತಾಯಿತು. ಬಸ್‌ನ ವಿಂಡೋ ಸೀಟ್ ಕಾಯ್ದಿರಿಸಲು ಕಿಟಕಿ ರಾಡ್‌ನನ್ನು ಪ್ರಯಾಣಿಕರು ಕಿತ್ತು ಹಾಕಿದ್ದಾರೆ.ಧರ್ಮಸ್ಥಳ ಬಸ್ ನಿಲ್ದಾಣದಲ್ಲಿ ಬಸ್ ಹತ್ತಲು ನೂಕಾಟ-ತಳ್ಳಾಟ ಆಗುತ್ತಿದೆ. ಭಾರೀ ಸಂಖ್ಯೆಯಲ್ಲಿ ಧರ್ಮಸ್ಥಳಕ್ಕೆ ಮಹಿಳಾ ಪ್ರಯಾಣಿಕರು ಬಂದಿದ್ದಾರೆ.ಸಿಂಗಲ್ ಡೋರ್ ಬಸ್ ಗಳಲ್ಲಿ ಬಸ್ ಹತ್ತಲು ಫುಲ್ ಗಲಾಟೆ ನಡೆಯುತ್ತಿದೆ. ಪ್ರತೀ ಐದು ನಿಮಿಷಕ್ಕೊಂದು ಬಸ್ ಇದ್ದರೂ ಭಾರೀ ಜನಜಂಗುಳಿ ಇದೆ. ಬಸ್‌ನ ಒಳಗಡೆ ಕಾಲಿಡೋದಕ್ಕೂ ಆಗದಂತೆ ಜನ ತುಂಬಿ ಹೋಗಿದ್ದಾರೆ. ಹಲವು ಮಹಿಳಾ ಪ್ರಯಾಣಿಕರು ನಿಂತುಕೊಂಡೆ ಪ್ರಯಾಣ ಮಾಡ್ತಿದ್ದಾರೆ. ಹೆಚ್ಚುವರಿ ಬಸ್ ಹಾಕಿದ್ರೂ ಪ್ರಯಾಣಿಕರ ರಶ್ ತಪ್ಪಿಲ್ಲ.

ಇದನ್ನೂ ವೀಕ್ಷಿಸಿ: ಮೆಗಾ ಎಜುಕೇಷನ್‌ ಎಕ್ಸ್‌ ಪೋ-3ಗೆ ಚಾಲನೆ:ಕಾರ್ಯಕ್ರಮದಲ್ಲಿ ನಟಿ ಹಿರಿಪ್ರಿಯಾ, ಶಾಸಕ ಪ್ರದೀಪ್‌ ಈಶ್ವರ್‌ ಭಾಗಿ

Video Top Stories