Dharwad| ಹುಟ್ಟುಹಬ್ಬದಂದು ಶಾಸಕ ಅಮೃತ ದೇಸಾಯಿ ಮಾದರಿ ನಡೆ

*  ವಿಶಿಷ್ಟವಾಗಿ 44 ನೇ ಜನ್ಮದಿನ ಆಚರಿಸಿಕೊಂಡ ಅಮೃತ ದೇಸಾಯಿ 
*  ಶಾಸಕ ಅಮೃತ ದೇಶಾಯಿ ಹಾಗೂ ಪತ್ನಿ ಪ್ರಿಯಾ ನೇತ್ರದಾನ
*  200 ಬೆಂಬಲಿಗರು ನೇತ್ರದಾನ ಮಾಡಲು ನೋಂದಣಿ 
 

First Published Nov 18, 2021, 10:42 AM IST | Last Updated Nov 18, 2021, 10:42 AM IST

ಧಾರವಾಡ(ನ.18):  ಧಾರವಾಡ ಶಾಸಕ ಅಮೃತ ದೇಸಾಯಿ ಅವರು ನೇತ್ರದಾನ ಮಾಡುವ ಮೂಲಕ ತಮ್ಮ ಹುಟ್ಟುಹಬ್ಬವನ್ನ ಆಚರಿಸಿಕೊಂಡಿದ್ದಾರೆ. ಈ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ. ಕಣ್ಣುದಾನ ಮಾಡುವ ಮೂಲಕ ವಿಶಿಷ್ಟವಾಗಿ 44 ನೇ ಜನ್ಮದಿನವನ್ನ ಆಚರಿಸಿಕೊಂಡಿದ್ದಾರೆ. ಶಾಸಕ ಅಮೃತ ದೇಶಾಯಿ ಹಾಗೂ ಪತ್ನಿ ಪ್ರಿಯಾ ಅವರು ನೇತ್ರದಾನ ಮಾಡಿದ್ದಾರೆ. ಇವರ ಜೊತೆಗೆ ಸುಮಾರು 200 ಬೆಂಬಲಿಗರು ನೇತ್ರದಾನ ಮಾಡಲು ನೋಂದಣಿ ಮಾಡಿಸಿಕೊಂಡಿದ್ದಾರೆ.

ಪರಿಷತ್ ಅಖಾಡ ರಂಗು : ದಳಪತಿಗಳು ಮಾತ್ರ ಫುಲ್ ಸೈಲೆಂಟ್ - ಕಾರಣ..?

ಪುನೀತ್‌ರಾಜ್‌ಕುಮಾರ್‌ ಅಗಲಿದ ನಂತರ ಅವರ ಕಣ್ಣುಗಳಿಂದ ನಾಲ್ಕು ಜನ ಅಂಧರಿಗೆ ಬೆಳಕಾಗಿದ್ದಾರೆ. ಅಪ್ಪು ನಿಧನದ ನಂತರ ರಾಜ್ಯಾದ್ಯಂತ ಜನರು ಸ್ವಯಂಪ್ರೇರಿತರಾಗಿ ಕಣ್ಣುದಾನ ಮಾಡಲು ಮುಂದಾಗಿದೆ. ಸಾವಿರಾರು ಸಂಖ್ಯೆಯಲ್ಲಿ ಜನರು ನೇತ್ರದಾನ ಮಾಡಲು ನೋಂದಣಿ ಮಾಡಿಸಿಕೊಂಡಿದ್ದಾರೆ.

Video Top Stories