ವಿಐಪಿಗಳಿಗೆ ಮಾತ್ರ ಹಾಸನಾಂಬೆ ದರ್ಶನಕ್ಕೆ ಬಿಡ್ತೀರಿ: ಪ್ರೀತಂಗೌಡಗೆ ಮಹಿಳೆ ಕ್ಲಾಸ್‌

ಶಾಸಕ‌ ಪ್ರೀತಂಗೌಡರನ್ನು ಹಾಸನಾಂಬೆಯ ಭಕ್ತರು ತರಾಟೆಗೆ ತೆಗೆದುಕೊಂಡಿದ್ದು, ವಿಐಪಿಗಳನ್ನು ದರ್ಶನಕ್ಕೆ ಬಿಡ್ತೀರಿ, ನಾವೇನು ಮಾಡ್ಬೇಕು ಎಂದು ಕಿಡಿ ಕಾರಿದ್ದಾರೆ.

First Published Oct 23, 2022, 3:36 PM IST | Last Updated Oct 23, 2022, 3:36 PM IST

ಹಾಸನಾಂಬೆ ದರ್ಶನೋತ್ಸವಕ್ಕೆ ಭಕ್ತಸಾಗರ ಹರಿದು ಬರುತ್ತಿದ್ದು, ರಾಜ್ಯದ ಮೂಲೆ ಮೂಲೆಯಿಂದ ಸಾವಿರಾರು ಭಕ್ತರು ತಂಡೋಪಾದಿಯಲ್ಲಿ ಆಗಮಿಸುತ್ತಿದ್ದು, ನಿರೀಕ್ಷೆಗೂ ಮೀರಿ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದೆ. ಈ ವೇಳೆ ವಿಐಪಿಗಳಿಗೆ ಹೆಚ್ಚಾಗಿ ದರ್ಶನಕ್ಕೆ ಬಿಡುತ್ತಿದ್ದೀರಿ ಎಂದು ದೇವಸ್ಥಾನದ ಬಳಿ ಪ್ರೀತಂಗೌಡ ವಿರುದ್ಧ ಭಕ್ತರು ಆಕ್ರೋಶ ಹೊರಹಾಕಿದ್ದಾರೆ. ನಿನ್ನೆ ಸಂಜೆ ಮುಖ್ಯದ್ವಾರದಲ್ಲಿ ಘಟನೆ ನಡೆದಿದ್ದು, ನಾವು ಇಲ್ಲಿಯೇ ನಿಲ್ಲಬೇಕಾ ಹೇಳಿ ಸರ್ ಎಂದು ಮಹಿಳೆ ಶಾಸಕರಿಗೆ ಪ್ರಶ್ನೆ ಮಾಡಿದ್ದಾರೆ. ನೀವು ಹಾಗೂ ರೇವಣ್ಣ ಎಷ್ಟು ಜನರನ್ನು ಒಳಗೆ ಕಳುಹಿಸುತ್ತಿದ್ದೀರಾ, ನಾವು ನೋಡಿದ್ವಿ ಎಂದು ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಭಕ್ತರು ಪ್ರಶ್ನಿಸುತ್ತಿದ್ದಂತೆ  ಶಾಸಕ ಪ್ರೀತಂಗೌಡ   ತಬ್ಬಿಬ್ಬಾಗಿದ್ದು, ನಾನು ಯಾರನ್ನು ಬಿಟ್ಟಿಲ್ಲ, ನನ್ನ ಕೈಲಾದ ಕೆಲಸ‌ ಮಾಡಿದ್ದೀನಿ ಎಂದು ಹೇಳಿ ಹೊರಟಿದ್ದಾರೆ. 

ಬೆಂಗಳೂರಿನಲ್ಲಿ ದೀಪಾವಳಿ ಮಾರುಕಟ್ಟೆಗೆ ‘ಗ್ರಹಣ’ ಗೊಂದಲ

Video Top Stories