ಕಲಬುರಗಿ: ಶೀವೂರ ಗ್ರಾಮದ ರೈತ ಬೆಳೆದ ಬಾಳೆ ಬಾಯಿಗೆ ಬರಲಿಲ್ಲ....!

ಜಿಲ್ಲೆಯ ಅಫಜಲಪುರ ತಾಲೂಕಿನ ಶೀವೂರ ಗ್ರಾಮದ ರೈತ ಶೀವಾನಂದ ಡಬ್ಬೆ ಅವರ ತೋಟದಲ್ಲಿ ಶನಿವಾರ ರಾತ್ರಿ ಸುರಿದ ಬಿರುಗಾಳಿ ಮಳೆಗೆ ಸುಮಾರು 2 ಸಾವಿರ ಬಾಳೆ ಗಿಡಗಳು ನೆಲಕ್ಕುರುಳಿವೆ ಹೀಗಾಗಿ ರೈತ ಕಂಗಾಲಾಗಿದ್ದಾರೆ.

First Published May 17, 2020, 10:36 PM IST | Last Updated May 17, 2020, 10:36 PM IST

ಕಲಬುರಗಿ, (ಮೇ.17):  ಜಿಲ್ಲೆಯ ಅಫಜಲಪುರ ತಾಲೂಕಿನ ಶೀವೂರ ಗ್ರಾಮದ ರೈತ ಶೀವಾನಂದ ಡಬ್ಬೆ ಅವರ ತೋಟದಲ್ಲಿ ಶನಿವಾರ ರಾತ್ರಿ ಸುರಿದ ಬಿರುಗಾಳಿ ಮಳೆಗೆ ಸುಮಾರು 2 ಸಾವಿರ ಬಾಳೆ ಗಿಡಗಳು ನೆಲಕ್ಕುರುಳಿವೆ ಹೀಗಾಗಿ ರೈತ ಕಂಗಾಲಾಗಿದ್ದಾರೆ.

ರೈತ ಶೀವಾನಂದ ಡಬ್ಬೆ  ಸುಮಾರು 5-6 ಲಕ್ಷ ರೂ. ಸಾಲ ಮಾಡಿ ಬಾಳೆ ಬೆಳೆದಿದ್ದರು.ಸದ್ಯ ಈಗ ಮಾರಾಟ ಮಾಡಬೇಕು ಎನ್ನೂವುದರಲ್ಲಿ ರೈತನಿಗೆ ದಿಕ್ಕೂ  ತೋಚದಂತಾಗಿದೆ.

ರೈತನ ತೋಟಕ್ಕೆ ಸಮಾಜ ಸೇವಕ ಜೆ.ಎಂ.ಕೊರಬು ಭೇಟಿ ನೀಡಿ ರೈತನಿಗೆ ಆತ್ಮಸ್ಥೈರ್ಯ ತುಂಬಿ ಶಿಘ್ರದಲ್ಲೇ ಜೆ.ಎಂ.ಕೊರಬು ಫೌಂಡೇಶನ ವತಿಯಿಂದ ಪರಿಹಾರ ಧನ ನೀಡುತ್ತೇವೆ ಎಂದು ಭರವಸೆ ನೀಡಿ ಹಾಗೂ ಸರ್ಕಾರದಿಂದ ಪರಿಹಾರ ವಿತರಣೆಗೆ ಶ್ರವಿುಸಲಾಗುವುದು ಎಂದು ತಿಳಿಸಿದ್ದಾರೆ. ಈ ಭರವಸೆ ಬೇಗ ಈಡೇರಿಸಿ ರೈತನ ಕಣ್ಣೀರು ಒರೆಸುವಂತಾಗಲಿ.