Asianet Suvarna News Asianet Suvarna News

Belagavi Vaccine Botch: 3 ಕಂದಮ್ಮಗಳ ಸಾವಿಗೆ ಸಿಬ್ಬಂದಿಯ ನಿರ್ಲಕ್ಷ್ಯವೇ ಕಾರಣ!

*ರೊಬೆಲ್ಲಾ ಲಸಿಕೆ ಪಡೆದಿದ್ದ 3 ಮಕ್ಕಳ ನಿಗೂಢ ಸಾವು
*ಮಕ್ಕಳ ಸಾವಿಗೆ ಸಿಬ್ಬಂದಿಯ ನಿರ್ಲಕ್ಷ್ಯವೇ ಕಾರಣ!
*MR ಲಸಿಕೆಯ ವಯಲ್‌ ತೆಗೆದುಕೊಂಡು ಹೋಗಿದ್ದ ನರ್ಸ್‌ 

ಬೆಳಗಾವಿ(ಜ. 17): ರೂಬೆಲ್ಲಾ ಲಸಿಕೆ (Rubella) ಪಡೆದಿದ್ದ ಮೂರು ಕಂದಮ್ಮಗಳು ನಿಗೂಢವಾಗಿ ಅಸುನೀಗಿರುವ ಮನಕಲಕುವ ಘಟನೆ ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ (Belagavi) ನಡೆದಿತ್ತು. ಘಟನೆ ಬೆನ್ನಲ್ಲೇ ಎಚ್ಚೆತ್ತ ಆರೋಗ್ಯ ಇಲಾಖೆ ತನಿಖೆಗೆ ಆದೇಶಿಸಿತ್ತು. ಜಿಲ್ಲೆಯ ರಾಮದುರ್ಗ ತಾಲೂಕಿನ ಬೋಚಬಾಳ ಗ್ರಾಮದ ಪವಿತ್ರಾ ಹುಲಗೂರ (13 ತಿಂಗಳು), ಮಧು ಕರಗುಂದಿ (14 ತಿಂಗಳು) ಹಾಗೂ ಮಲ್ಲಾಪುರ ಗ್ರಾಮದ ಚೇತನ ಪೂಜಾರಿ (18 ತಿಂಗಳು) ಮೃತ ಕಂದಮ್ಮಗಳು.

ಇದನ್ನೂ ಓದಿ: Rubella Vaccine ಪಡೆದಿದ್ದ 3 ಮಕ್ಕಳ ನಿಗೂಢ ಸಾವು: ತನಿಖೆಗೆ ಆದೇಶ!

ಈಗ ಬೆಳಗಾವಿಯ 3 ಮಕ್ಕಳ ಸಾವಿಗೆ ಸಿಬ್ಬಂದಿಯ ನಿರ್ಲಕ್ಷ್ಯವೇ ಕಾರಣ ಎಂದು ತಿಳಿದು ಬಂದಿದೆ.  ಸಾಲಹಳ್ಳಿ ಪ್ರಾಥಮಿಕ ಕೇಂದ್ರ  ಸಿಬ್ಬಂದಿ ನಿರ್ಲಕ್ಷ್ಯ ಈಗ ತನಿಖೆಯಲ್ಲಿ ಬಯಲಾಗಿದೆ. ನರ್ಸ್‌ ಸಲ್ಮಾ ಮಹತಾ, ಫಾರ್ಮಸಿಸ್ಟ್‌ ಜಯರಾಜ್‌ ಕುಂಬಾರ ನಿರ್ಲಕ್ಷ್ಯದಿಂದಲೇ ಈ ಘಟನೆ ನಡೆದಿದೆ ಎಂದು ತನಿಖೆಯಲ್ಲಿ ಬಯಲಾಗಿದೆ. ಆರೋಗ್ಯ ಕೇಂದ್ರದಿಂದ MR ಲಸಿಕೆಯ 6 ವಯಲ್‌ (Vial) ತೆಗೆದುಕೊಂಡು ಹೋಗಿ ನರ್ಸ್‌ ಮನೆಯ ಫ್ರಿಡ್ಜ್‌ನಲ್ಲಿ ಇಟ್ಟಿದ್ದರು ಎಂದು ತಿಳಿದುಬಂದಿದೆ. ಈ ಮಕ್ಕಳಿಗೆ ಜನವರಿ 12ರಂದು ಸಾಲಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ರೂಬೆಲ್ಲಾ ಚುಚ್ಚುಮದ್ದು ನೀಡಲಾಗಿತ್ತು.