Asianet Suvarna News Asianet Suvarna News

ಬಾಯ್ಲರ್‌ ಸ್ಫೋಟ ಪ್ರಕರಣ: ಮೃತಪಟ್ಟವರ ಸಂಖ್ಯೆ 4ಕ್ಕೆ ಏರಿಕೆ

*  ಗಾಯಗೊಂಡಿದ್ದ ಧನಲಕ್ಷ್ಮೀ ಹಾಗೂ ಸಚಿನ್‌ ಸಾವು
*  ಎಂಎಂ ಫುಡ್‌ ಫ್ಯಾಕ್ಟರಿಯಲ್ಲಿ ಬಾಯ್ಲರ್‌ ಸ್ಫೋಟ
*  ಸ್ಥಳದಲ್ಲೇ ಮೃತಪಟ್ಟಿದ್ದ ಬಿಹಾರ ಮೂಲದ ಇಬ್ಬರು ಕಾರ್ಮಿಕರು
 

ಬೆಂಗಳೂರು(ಆ.24): ನಗರದ ಮಾಗಡಿ ರಸ್ತೆಯ ಎಂಎಂ ಫುಡ್‌ ಫ್ಯಾಕ್ಟರಿಯಲ್ಲಿ ಬಾಯ್ಲರ್‌ ಸ್ಫೋಟ ದುರಂತದಲ್ಲಿ ಮೃತಪಟ್ಟರ ಸಂಖ್ಯೆ 4ಕ್ಕೆ ಏರಿಕೆಯಾಗಿದೆ. ಗಾಯಗೊಂಡಿದ್ದ ಧನಲಕ್ಷ್ಮೀ ಹಾಗೂ ಸಚಿನ್‌ ಸಾವನ್ನಪ್ಪಿದ್ದಾರೆ. ವಿಕ್ಟೋರಿಯಾ ಆಸ್ಪತ್ರೆಗೆ ಮೃತಪಟ್ಟಿದ್ದಾರೆ. ನಿನ್ನೆ ನಡೆದ ಅವಘಡದಲ್ಲಿ ಬಿಹಾರ ಮೂಲದ ಇಬ್ಬರು ಕಾರ್ಮಿಕರು ಸ್ಥಳದಲ್ಲೇ ಅಸುನೀಗಿದ್ದರು. 

ಬೆಂಗಳೂರು ಫ್ಯಾಕ್ಟರಿಯಲ್ಲಿ ಸ್ಫೋಟ..ಇಬ್ಬರು  ಕಾರ್ಮಿಕರ ದುರ್ಮರಣ