ಬಾಗಲಕೋಟೆಯಲ್ಲಿ ಸಂಭ್ರಮದ ಗಣರಾಜ್ಯೋತ್ಸವ: ಕಾರಜೋಳರಿಂದ ಧ್ವಜಾರೋಹಣ

ಬಾಗಲಕೋಟೆಯಲ್ಲಿ ಸಂಭ್ರಮದ 71 ನೇ ಗಣರಾಜ್ಯೋತ್ಸವ| ಜಿಲ್ಲಾ ಕ್ರೀಡಾಂಗಣದಲ್ಲಿ ಧ್ವಜಾರೋಹಣ ಮಾಡಿದ ಗೋವಿಂದ ಕಾರಜೋಳ| ಧ್ವಜಾರೋಹಣ ಬಳಿಕ ಪರೇಡ್ ವೀಕ್ಷಿಸಿದ ಡಿಸಿಎಂ ಗೋವಿಂದ ಕಾರಜೋಳ|

First Published Jan 26, 2020, 12:55 PM IST | Last Updated Jan 26, 2020, 12:55 PM IST

ಬಾಗಲಕೋಟೆ(ಜ.26): 71 ನೇ ಗಣರಾಜ್ಯೋತ್ಸವ ದಿನದ ಹಿನ್ನಲೆಯಲ್ಲಿ ಉಪಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಧ್ವಜಾರೋಹಣ ಮಾಡಿದ್ದಾರೆ. ಜಿಲ್ಲಾ ಕ್ರೀಡಾಂಗಣದಲ್ಲಿ ‌ಜಿಲ್ಲಾಡಳಿತ ವತಿಯಿಂದ ಧ್ವಜಾರೋಹಣ ಕಾರ್ಯಕ್ರಮ ಆಯೋಜನೆಯಾಗಿತ್ತು. 

ಧ್ವಜಾರೋಹಣದ ಬಳಿಕ ಡಿಸಿಎಂ ಗೋವಿಂದ ಕಾರಜೋಳ ಪರೇಡ್ ವೀಕ್ಷಿಸಿದ್ದಾರೆ. ಆಕರ್ಷಕ ಪರೇಡ್‌ನಲ್ಲಿ 23 ತಂಡಗಳು ಭಾಗಿಯಾಗಿದ್ದವು. ಧ್ವಜಾರೋಹಣ ಕಾರ್ಯಕ್ರಮದಲ್ಲಿ ಸಂಸದ ಪಿ ಸಿ ಗದ್ದಿಗೌಡರ, ಶಾಸಕ ವೀರಣ್ಣ ಚರಂತಿಮಠ, ಜಿಪಂ ಅಧ್ಯಕ್ಷೆ ಬಾಯಕ್ಕ ಮೇಟಿ, ಜಿಲ್ಲಾಧಿಕಾರಿ ರಾಜೇಂದ್ರ, ಸಿಇಓ ಗಂಗೂಬಾಯಿ ಮಾನಕರ್ ಸೇರಿದಂತೆ ಅಧಿಕಾರಿಗಳು ಭಾಗಿ‌‌ಯಾಗಿದ್ದರು.