ಗೋಮಾತೆಗೆ ಪೂಜೆ ಸಲ್ಲಿಸಿ ಬರ್ತ್‌ಡೇ ಆಚರಿಸಿಕೊಂಡ ಡಿಸಿಎಂ ಕಾರಜೋಳ

ಗೋಮಾತೆಗೆ ಪೂಜೆ ಸಲ್ಲಿಸಿ ಹುಟ್ಟುಹಬ್ಬ ಆಚರಿಸಿಕೊಂಡ ಡಿಸಿಎಂ ಗೋವಿಂದ ಕಾರಜೋಳ| ಬಾಗಲಕೋಟೆ ಜಿಲ್ಲೆಯ ಮುಧೋಳದಲ್ಲಿ ಹುಟ್ಟುಹಬ್ಬ ಆಚರಣೆ| 70ನೇ ವರ್ಷಕ್ಕೆ ಕಾಲಿಟ್ಟ ಕಾರಜೋಳ| ಡಿಸಿಎಂಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದ ಶಾಲಾ ಮಕ್ಕಳು| 

First Published Jan 25, 2020, 2:48 PM IST | Last Updated Jan 25, 2020, 2:48 PM IST

ಬಾಗಲಕೋಟೆ(ಜ.25): ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. 70ನೇ ವರ್ಷಕ್ಕೆ ಕಾಲಿಡುತ್ತಿರುವ ಕಾರಜೋಳ ಇಂದು(ಶನಿವಾರ) ಜಿಲ್ಲೆಯ ಸ್ವಕ್ಷೇತ್ರ ಮುಧೋಳದಲ್ಲಿರುವ ಗೋಶಾಲೆಗೆ ಭೇಟಿ ನೀಡಿ ಗೋಮಾತೆಗೆ ಪೂಜೆ ಸಲ್ಲಿಸಿ ಅಲ್ಲಿಯೇ ಅಭಿಮಾನಿಗಳೊಂದಿಗೆ ಕೇಕ್ ಕತ್ತರಿಸಿ ಹುಟ್ಟುಹಬ್ಬವನ್ನ ಆಚರಿಸಿಕೊಂಡಿದ್ದಾರೆ.  

ಬಳಿಕ ಮುಧೋಳದ ಆಶ್ರಮ ಶಾಲೆಯ ವಿದ್ಯಾರ್ಥಿಗಳೊಂದಿಗೆ ಹುಟ್ಟುಹಬ್ಬ ಆಚರಿಕೊಂಡ ಕಾರಜೋಳ ಮಕ್ಕಳಿಕೆ ಕೇಕ್‌ ತಿನ್ನಿಸಿ ಸಂಭ್ರಮಾಚರಣೆ ಮಾಡಿದ್ದಾರೆ. ಇದೇ ವೇಳೆ ಶಾಲೆಯ ಮಕ್ಕಳು ಡಿಸಿಎಂಗೆ ಬರ್ತ್‌ಡೇ ವಿಶ್ ಮಾಡಿದ್ದಾರೆ. ಬೆಳಗ್ಗೆಯಿಂದಲೇ ಮುಧೋಳದಲ್ಲಿರುವ ಅವರ ನಿವಾಸಕ್ಕೆ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸಿ ಹುಟ್ಟುಹಬ್ಬದ ಶುಭಶಯಗಳನ್ನ ತಿಳಿಸಿದ್ದಾರೆ.