3 ನೇ ಅಲೆಯಲ್ಲಿ ಮಕ್ಕಳಿಗೆ ಭೀತಿ, ಉತ್ತರ ಕನ್ನಡ ಜಿಲ್ಲಾಡಳಿತದಿಂದ ಮಕ್ಕಳಿಗಾಗಿ ಕಾರ್ಯಯೋಜನೆ

ಕೊರೊನಾ ಎರಡನೇಯ ಅಲೆಯ ಅಬ್ಬರಕ್ಕೆ ರಾಜ್ಯದ ಜನರು ತತ್ತರಿಸಿ ಹೋಗಿದ್ದಾರೆ. ಈ ಹೊಡೆತದಿಂದ ಇದೀಗ ಚೇತರಿಸಿಕೊಳ್ಳುತ್ತಿರುವ ಜನರಿಗೆ ಮೂರನೇಯ ಅಲೆ ಮಕ್ಕಳಿಗೆ ಅಪಾಯಕಾರಿ ಎನ್ನುವುದು ಆತಂಕ‌ ಮೂಡಿಸಿದೆ.

First Published Jul 16, 2021, 9:43 AM IST | Last Updated Jul 16, 2021, 9:55 AM IST

ಕಾರವಾರ (ಜು. 16): ಕೊರೊನಾ ಎರಡನೇಯ ಅಲೆಯ ಅಬ್ಬರಕ್ಕೆ ರಾಜ್ಯದ ಜನರು ತತ್ತರಿಸಿ ಹೋಗಿದ್ದಾರೆ. ಈ ಹೊಡೆತದಿಂದ ಇದೀಗ ಚೇತರಿಸಿಕೊಳ್ಳುತ್ತಿರುವ ಜನರಿಗೆ ಮೂರನೇಯ ಅಲೆ ಮಕ್ಕಳಿಗೆ ಅಪಾಯಕಾರಿ ಎನ್ನುವುದು ಆತಂಕ‌ ಮೂಡಿಸಿದೆ.

ಮಾತು ತಪ್ಪಿದ ಸರ್ಕಾರ, ಉಳಿತಾಯ ಮಾಡಿದರೂ ಮೀನುಗಾರರಿಗೆ ಸಿಕ್ಕಿಲ್ಲ ಪರಿಹಾರ

ಈ ನಿಟ್ಟಿನಲ್ಲಿ ಮಕ್ಕಳ ಸುರಕ್ಷತೆಯ ಬಗ್ಗೆ ನಿರ್ಧರಿಸಿರುವ ಉತ್ತರಕನ್ನಡ ಜಿಲ್ಲಾಡಳಿತ ಮೂರನೇಯ ಅಲೆಯಿಂದ‌ ಮಕ್ಕಳನ್ನ ರಕ್ಷಣೆ ಮಾಡಲು ಅಗತ್ಯ ಮುಂಜಾಗ್ರತಾ ಕ್ರಮಕ್ಕೆ ಮುಂದಾಗಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಒಟ್ಟು 1,06, 263 ಮಂದಿ ಮಕ್ಕಳಿದ್ದಾರೆ. 184 ಮಕ್ಕಳು ತೀವ್ರ ಅಪೌಷ್ಠಿಕತೆಯಿಂದ ಬಳಲುತ್ತಿದ್ದಾರೆ. ಕೊರೋನಾ ಹೆಚ್ಚು ಬಾಧಿಸುವ ಪ್ರದೇಶದಲ್ಲಿ ಸರ್ವೆ ನಡೆಸಿ, ಮಲ್ಟಿ ವಿಟಮಿನ್, ಜಿಂಕ್- ಐಯಾನ್ ಸಿರಪ್, ಪ್ರೋಟಿನ್ ಪೌಡರ್ ವಿತರಣೆ ಮಾಡಲಾಗಿದೆ.