ಮದುವೆಗೆ ಆಗಮಿಸದೆ, ಇರುವ ಸ್ಥಳದಿಂದಲೇ ಆಶೀರ್ವದಿಸಿ... ಹೀಗೊಂದು ಕರೆಯೋಲೆ!

ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳ ಹಿನ್ನೆಲೆಯಲ್ಲಿ ಬಹುತೇಕ ಮದುವೆಗಳು ಮುಂದೂಡಲ್ಪಡುತ್ತಿವೆ. ಅಲ್ಲದೇ ಮದುವೆಗೆ ಇಷ್ಟೇ ಜನರ ಮಿತಿಯನ್ನು ಸರ್ಕಾರವೇ ನಿಗದಿಪಡಿಸಿದೆ. 

First Published Jan 21, 2022, 7:25 PM IST | Last Updated Jan 21, 2022, 7:25 PM IST

ಚಾಮರಾಜನಗರ: ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳ ಹಿನ್ನೆಲೆಯಲ್ಲಿ ಬಹುತೇಕ ಮದುವೆಗಳು ಮುಂದೂಡಲ್ಪಡುತ್ತಿವೆ. ಅಲ್ಲದೇ ಮದುವೆಗೆ ಇಷ್ಟೇ ಜನರ ಮಿತಿಯನ್ನು ಸರ್ಕಾರವೇ ನಿಗದಿಪಡಿಸಿದೆ. ಈ ಹಿನ್ನೆಲೆಯಲ್ಲಿ ಚಾಮರಾಜನಗರ ತಾಲೂಕಿನ  ಚನ್ನಪ್ಪನಪುರದ ಕುಟುಂಬವೊಂದು 'ಮದುವೆಗೆ  ಆಗಮಿಸದೆ ಇರುವ ಸ್ಥಳದಲ್ಲೇ ಆಶೀರ್ವದಿಸಿ' ಎಂದು ಆಹ್ವಾನ ಪತ್ರಿಕೆಯಲ್ಲಿ ಪ್ರಕಟಿಸಲಾಗಿದೆ.  ಚಾಮರಾಜನಗರ ತಾಲೂಕಿನ  ಚನ್ನಪ್ಪನಪುರದ ಶ್ರೇಯಸ್, ಹಾಗೂ ವಿ.ಸಿ.ಹೊಸೂರಿನ ಸುಷ್ಮಾ ವಿವಾಹ ಜ. 22 - 23 ನಿಗದಿಯಾಗಿದೆ. ಮದುವೆಗೆ ಸಾವಿರಾರು ಲಗ್ನಪತ್ರಿಕೆಯನ್ನು ಎರಡೂ ಕುಟುಂಬಗಳು ಹಂಚಿಕೆ ಮಾಡಿವೆ. 

ಪ್ರಸ್ತುತ ಹೆಚ್ಚುತ್ತಿರುವ ಕೊರೋನಾ ಹಿನ್ನೆಲೆ  ತಮ್ಮಿಂದ ಕೊರೋನಾ ಹರಡಬಾರದು ಎಂಬ ಉದ್ದೇಶದಿಂದ  ಸರಳಾತಿಸರಳವಾಗಿ ಮದುವೆ ಮಾಡಲು ಕುಟುಂಬಗಳು ನಿರ್ಧರಿಸಿವೆ. ಜನರನ್ನು ಸೇರಿಸದೆ ಮದುವೆ ಮಾಡಲು ಎರಡು ಕುಟುಂಬಗಳು ಮಾತ್ರ ಭಾಗಿಯಾಗಿ ವಿವಾಹ ನೆರವೇರಿಸಲು ನಿರ್ಧರಿಸಿದಾಗಿ ಈ ಕುಟುಂಬಗಳು ತಿಳಿಸಿವೆ. 

Video Top Stories