Asianet Suvarna News Asianet Suvarna News

ಸಣ್ಣ ವಯಸ್ಸಿನಲ್ಲಿ ಅಪ್ಪು ಸಾಯಬಾರದಿತ್ತು, ಭಾವಚಿತ್ರದ ಎದುರು ಕಣ್ಣೀರಿಟ್ಟ ಅಜ್ಜಿ..!

Nov 14, 2021, 11:38 AM IST

ಕೊಪ್ಪಳ (ನ. 14):  ಯಲಬುರ್ಗಾ ತಾಲೂಕಿನ ಕುಕನೂರಿನ ಬಸ್‌ವೊಂದರಲ್ಲಿ ಪುನೀತ್‌  (Puneeth Rajkumar) ಭಾವಚಿತ್ರ ಕಂಡು ವೃದ್ಧೆಯೊಬ್ಬರು ಕಣ್ಣೀರಿಟ್ಟಿದ್ದಾರೆ.  ಪುನೀತ್‌ ಅವರ ಫೋಟೋ ಇದ್ದ ಜಾಹೀರಾತನ್ನು ಬಸ್‌ನಲ್ಲಿ ನೋಡಿದ ವೃದ್ಧೆ ಫೋಟೋವನ್ನು ಸೆರಗಿನಿಂದ ಒರೆಸಿ ಕಣ್ಣೀರಿಟ್ಟಿದ್ದಾರೆ. ಈ ದೃಶ್ಯ ಭಾರಿ ವೈರಲ್‌ ಆಗಿದೆ.

'ಪುನೀತ್ ಸಣ್ಣವನಿದ್ದಾಗ ಟಿವಿಯಲ್ಲಿ ನೋಡಿದ್ದೆ. ಅಪ್ಪು ಇಲ್ಲ ಎಂದು ಯಾರೋ ಹೇಳಿದರು. ಇಷ್ಟು ಸಣ್ಣ ವಯಸ್ಸಿನಲ್ಲಿ ಸಾಯಬಾರದಿತ್ತು. ದುಃಖ ತಡೆಯಲಾಗಲಿಲ್ಲ' ಎಂದು ಅಜ್ಜಿ ಕಣ್ಣೀರಿಟ್ಟರು. ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ಅಜ್ಜಿ ಮಾತನಾಡಿದರು.