Asianet Suvarna News Asianet Suvarna News

ಯಕ್ಷಗಾನದಲ್ಲಿ ಕೊರೋನಾ ಜಾಗೃತಿ.. ಜನ ಮೆಚ್ಚಿದ ಕಲಾವಿದರ ಪ್ರೀತಿ!

ತಿರುಗಾಟ ನಿಲ್ಲಿಸಿದ ಯಕ್ಷಗಾನ ಮೇಳಗಳು/ ಯಕ್ಷಗಾನದಲ್ಲಿಯೂ ಕೊರೋನಾ ಜಾಗೃತಿ/ ಸೋಶಿಯಲ್ ಮೀಡಿಯಾದಲ್ಲಿ ಜನ ಮೆಚ್ಚುಗೆ

First Published Mar 17, 2020, 11:45 PM IST | Last Updated Mar 17, 2020, 11:45 PM IST

ಮಂಗಳೂರು(ಮಾ.17) ಕೊರೋನಾ ಪರಿಣಾಮ ಯಕ್ಷಗಾನ ಕಲೆಯ ಮೇಲೂ ಆಗಿದೆ. ಯಕ್ಷಗಾನ ಮೇಳಗಳೂ ಸಹ ತಮ್ಮ ತಿರುಗಾಟವನ್ನು ನಿಲ್ಲಿಸಿದ್ದು ಜಾಗೃತಿ ಮೂಡಿಸುವ ಕೆಲಸವನ್ನು ಮಾಡಿವೆ.

ಸಾಲಿಗ್ರಾಮ ಮೇಳದ ಯಕ್ಷಗಾನ ವೇದಿಕೆಯಲ್ಲಿ ಹಿರಿಯ ಕಲಾವಿದ ಕೃಷ್ಣಯಾಜಿ ಮಾತನಾಡಿ, ಕೊರೋನಾದ ಮಾರಕ ಪರಿಣಾಮ ಮತ್ತು ತೆಗೆದುಕೊಳ್ಳಬೇಕಾದ ಎಚ್ಚರಿಕೆಯನ್ನು ಸಭಿಕರಿಗೆ ತಿಳಿಸಿಕೊಟ್ಟರು.

ಪ್ರತಿ ಆಖ್ಯಾನದಲ್ಲಿಯೂ ಕರೋನಾ ಮಾರಿ ಜೋರಾದ ನಂತರ ಹೀಗೆ ಜಾಗೃತಿ ಮೂಡಿಸಿಕೊಂಡು ಬರಲಾಗುತ್ತಿದೆ. . ಕೆಮ್ಮು, ಜ್ವರ, ನೆಗಡಿ ಮುಂತಾದ ಲಕ್ಷಣಗಳು ಕಂಡುಬಂದರೆ ಜಾಗೃತಿವಹಿಸಬೇಕು, ತಂಪು ಪಾನೀಯವನ್ನು ಸೇವಿಸುವುದು ಕಡಿಮೆ ಮಾಡಬೇಕು ಎಂಬಿತ್ಯಾದಿ ಕ್ರಮಗಳನ್ನು ಮನವರಿಕೆ ಮಾಡಿಕೊಟ್ಟರು.

 

Video Top Stories