Asianet Suvarna News Asianet Suvarna News

ರಸ್ತೆ ರಸ್ತೆಯಲ್ಲಿ ಬಳಸಿದ ಪಿಪಿಇ ಕಿಟ್... ಬೆಂಗಳೂರಿಗರೆ ಎಚ್ಚರ ಎಚ್ಚರ!

ಬೆಂಗಳೂರಿಗೆ ಅಂಟಿಕೊಂಡ ಹೊಸ ಕಸ/ ಪಿಪಿಇ ಕಿಟ್ ವಿಲೇವಾರಿ ಮಾಡುವವರೇ ಗತಿ ಇಲ್ಲ/ ರಸ್ತೆ ರಸ್ತೆಯಲ್ಲಿ ಬಿದ್ದಿರುವ ಬಳಸಿ ಬಿಸಾಡಿದ ಪಿಪಿಇ ಕಿಟ್/ ಬೆಂಗಳೂರಿಗೆ ಕರೋನಾ ಜತೆಗೆ ಇದೊಂದು ಹಿಂಸೆ

ಬೆಂಗಳೂರು(ಜು. 10) ಕೊರೋನಾ ದೊಡ್ಡ ಸಮಸ್ಯೆಯಾಗಿದ್ದರೆ ಇದರ ಅಡ್ಡ ಪರಿಣಾಮಗಳು ಸಹ ಅಷ್ಟೇ ಕಠೋರವಾಗಿದೆ. ಬೆಂಗಳೂರು ಈ ಹೊಸ ಕಸವನ್ನು ಅನಿವಾರ್ಯವಾಗಿ ತನ್ನ ಒಡಲಿನಲ್ಲಿ ತುಂಬಿಕೊಳ್ಳುತ್ತಿದೆ.

ರಸ್ತೆ ರಸ್ತೆಯಲ್ಲಿ ಬಳಕೆ ಮಾಡಿದ ಪಿಪಿಇ ಕಿಟ್ ಗಳು ಬಿದ್ದಿವೆ.  ಬಿಬಿಎಂಪಿ ಹಾಗೂ ಆರೋಗ್ಯ ಇಲಾಖೆಗೆ ಇದರ ಬಗ್ಗೆ ಗೊತ್ತೇ ಇಲ್ಲ!  ಕೆ ಆರ್ ಪುರಂನ ಓಲ್ಡ್ ಮದ್ರಾಸ್ ರೋಡ್ ನಲ್ಲಿ ಬಿದ್ದಿರುವ ಪಿಪಿಇ ಕಿಟ್ ಗಳನ್ನು ನೋಡಿದರೆ ನಾವು ಇನ್ನೊಂದು ಆತಂಕವನ್ನು ನಮ್ಮ ಮೈಮೇಲೆ ಎಳೆದುಕೊಳ್ಳುತ್ತಿದ್ದೇವೆ ಎಂದೆನಿಸುತ್ತಿದೆ.

ಶುಕ್ರವಾರದ ಕೊರೋನಾ ಸ್ಫೋಟ; ಬೆಂಗಳೂರ ಕತೆ ಏನು? 

ಆಡಳಿತಕ್ಕೆ ಮಾಹಿತಿ ನೀಡಿದ್ದರೂ ಪ್ರಯೋಜನವಾಗಿಲ್ಲ. ಗಾರ್ಬೆಜ್ ಸಿಟಿ ಎಂದು ಹಿಂದೆ ಕರೆಸಿಕೊಂಡಿದ್ದ ಬೆಂಗಳೂರಿಗೆ ಈಗ ಇದೊಂದು ಹೊಸ ಕಸ ಸವಾಲು. ಬೇರೆ ಕಸವಾಗಿದ್ದರೆ ವಾಸನೆ ಮಾತ್ರ ಕಾಡುತ್ತಿತ್ತು. ಈ ಕಸ ಜೀವವನ್ನೇ ಹೊತ್ತೊಯ್ಯಬಹುದು. ವರದಿ ನಂತರವಾದರೂ ಎಚ್ಚೆತ್ತುಕೊಂಡರೆ ದೊಡ್ಡ ಘನಕಾರ್ಯವಾದೀತು!

Video Top Stories