ಸಿಎಂ ತವರಲ್ಲಿ ಕೊರೊನಾ ವಾರಿಯರ್‌ಗೆ ಅವಮಾನ!

ಕೊರೊನಾ ಸೋಂಕಿತರನ್ನು ಆರೈಕೆ ಮಾಡುವ ಆರೋಗ್ಯ ಇಲಾಖೆಯ ಅಧಿಕಾರಿ ಮತ್ತವರ ಕುಟುಂಬಕ್ಕೆ ಅವಮಾನ ಎದುರಾಗುತ್ತಿದೆ. DHO ಕಚೇರಿಯಲ್ಲಿ ಕೆಲಸ ಮಾಡುವ ತಾಲ್ಲೂಕು ನೇತ್ರಾಧಿಕಾರಿಗೆ ಕೊರೊನಾ ವಾರಿಯರ್ ಕೆಲಸ ಸಂಕಷ್ಟ ತಂದಿಟ್ಟಿದೆ. 

First Published Jul 10, 2020, 4:45 PM IST | Last Updated Jul 10, 2020, 4:45 PM IST

ಶಿವಮೊಗ್ಗ(ಜು.10): ಕೊರೋನಾ ವಾರಿಯರ್‌ ಆಗಿ ಕಾರ್ಯ ನಿರ್ವಹಿಸುತ್ತಿರುವ ವ್ಯಕ್ತಿಗೆ ಸ್ಥಳೀಯರಿಂದ ಅವಮಾನ ಎದುರಾಗುತ್ತಿದೆ. ಅದು ಸುಕ್ಷಿತರ ನಾಡು, ಮುಖ್ಯಮಂತ್ರಿ ತವರು ಜಿಲ್ಲೆ ಶಿವಮೊಗ್ಗದಲ್ಲಿ ಎಂದರೆ ನಿಮಗೂ ಅಚ್ಚರಿಯಾಗಬಹುದು.

ಹೌದು, ಕೊರೊನಾ ಸೋಂಕಿತರನ್ನು ಆರೈಕೆ ಮಾಡುವ ಆರೋಗ್ಯ ಇಲಾಖೆಯ ಅಧಿಕಾರಿ ಮತ್ತವರ ಕುಟುಂಬಕ್ಕೆ ಅವಮಾನ ಎದುರಾಗುತ್ತಿದೆ. DHO ಕಚೇರಿಯಲ್ಲಿ ಕೆಲಸ ಮಾಡುವ ತಾಲ್ಲೂಕು ನೇತ್ರಾಧಿಕಾರಿಗೆ ಕೊರೊನಾ ವಾರಿಯರ್ ಕೆಲಸ ಸಂಕಷ್ಟ ತಂದಿಟ್ಟಿದೆ. 

ಆನ್‌ಲೈನ್‌ ಶಿಕ್ಷಣ ಬೇಡ: ವಾಟಾಳ್ ಪ್ರತಿಭಟನೆ

ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಹನುಮಂತಾಪುರ ಗ್ರಾಮದ ರುದ್ರೇಶ್ ಕುಟುಂಸ್ಥರ ವಿರುದ್ಧ ವ್ಯವಸ್ಥಿತವಾದ ಅಪಪ್ರಚಾರ ಮಾಡಲಾಗುತ್ತಿದೆ. ದಯವಿಟ್ಟು ನಮ್ಮ ಬಗ್ಗೆ ಅಪಪ್ರಚಾರ ಮಾಡ ಬೇಡಿ, ಕೈಮುಗಿದು ಬೇಡಿಕೊಳ್ಳುತ್ತಿದ್ದಾರೆ ಕೊರೋನಾ ವಾರಿಯರ್ ರುದ್ರೇಶ್. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.