Asianet Suvarna News Asianet Suvarna News

ಮದುವೆಗೆ ಹೋಗಿ ಶುಭ ಹಾರೈಸಿದ MLA: ನವ ದಂಪತಿಗೆ ಮಾಸ್ಕ್‌ ಹಾಕಿಸಿದ ರೇಣುಕಾಚಾರ್ಯ

ಮದುವೆಯಲ್ಲಿ ಪಾಲ್ಗೊಂಡ ಶಾಸಕ ರೇಣುಕಾಚಾರ್ಯ| ದಾವಣಗೆರೆ ಜಿಲ್ಲೆ ಹೊನ್ನಾಳಿಯಲ್ಲಿ ನಡೆದ ಮದುವೆ ಸಮಾರಂಭ|ಗಂಡಿನಿಂದ ಹೆಣ್ಣಿಗೆ, ಹೆಣ್ಣಿನಿಂದ ಗಂಡಿಗೆ ಮಾಸ್ಕ್‌ ಹಾಕಿಸಿದ ರೇಣುಕಾಚಾರ್ಯ| ನವ ದಂಪತಿಯ ಜೊತೆಗೆ ನಿಂತು ಪೋಟೋ ತೆಗೆಸಿಕೊಂಡ ಎಂಎಲ್‌ಎ|

First Published May 16, 2020, 3:23 PM IST | Last Updated May 16, 2020, 3:23 PM IST

ದಾವಣಗೆರೆ(ಮೇ.16):  ಕೊರೋನಾ ಆತಂಕದ ಮಧ್ಯೆ ಜಿಲ್ಲೆಯ ಹೊನ್ನಾಳಿಯಲ್ಲಿ ನಡೆದ ಮದುವೆಯಲ್ಲಿ ಶಾಸಕ ರೇಣುಕಾಚಾರ್ಯ ಅವರು ಪಾಲ್ಗೊಂಡಿದ್ದರು. ಈ ವೇಳೆ ನವದಂಪತಿಗೆ ಶುಭ ಕೋರಿದ ರೇಣುಕಾಚಾರ್ಯ ವಧು ವರರಿಗೆ ಮಾಸ್ಕ್‌ ಹಾಕಿಸುವ ಮೂಲಕ ಮಾರಕ ಕೊರೋನಾ ಬಗ್ಗೆ ಜಾಗೃತಿ ಮೂಡಿಸಿದ್ದಾರೆ. 

ದ್ವಿತೀಯ PUC ಇಂಗ್ಲೀಷ್ ಪರೀಕ್ಷೆ ಬಗ್ಗೆ ಮಹತ್ವದ ನಿರ್ಧಾರ ಪ್ರಕಟ

ಗಂಡಿನಿಂದ ಹೆಣ್ಣಿಗೆ, ಹೆಣ್ಣಿನಿಂದ ಗಂಡಿಗೆ ಮಾಸ್ಕ್‌ ಹಾಕಿಸಿದ್ದಾರೆ. ಜೊತೆಗೆ ನವ ದಂಪತಿಯ ಜೊತೆಗೆ ನಿಂತು ಪೋಟೋ ತೆಗೆಸಿಕೊಳ್ಳುವ ಮೂಲಕ ಮದುವೆ ಶುಭಾಶಯ ತಿಳಿಸಿದ್ದಾರೆ. ಸರ್ಕಾರದ ಸೂಚನೆಯಂತೆ ಮದುವೆಯಲ್ಲಿ ಕೆಲವೇ ಕೆಲವು ಜನರು ಮಾತ್ರ ಭಾಗವಹಿಸಿದ್ದರು.