ಕಾಫಿ ನಾಡಲ್ಲಿ ಕಾಡಾನೆಗಳದ್ದೇ ಕಾರುಬಾರು, ಬಿಂದಾಸ್ ರೌಂಡ್ಸ್!
ಕೊರೋನಾ ಕಾರಣ/ ಕಡಿಮೆಯಾದ ಜನಸಂಚಾರ/ ಕಾಫಿ ನಾಡಲ್ಲೆ ಆನೆಗಳದ್ದೇ ಕಾರುಬಾರು/ ಮುಕ್ತವಾಗಿ ಸಂಚರಿಸುತ್ತಿರುವ ಕಾಡಾನೆಗಳಿಂದ ಕಾಫಿ ಬೆಳಗೆ ಆತಂಕ
ಚಿಕ್ಕಮಗಳೂರು (ಮೇ 17) ಕಾಫಿನಾಡು ಚಿಕ್ಕಮಗಳೂರಲ್ಲಿ ಕಾಡಾನೆಗಳು ಆರಾಮಾಗಿ ಸುತ್ತಾಡಿಕೊಂಡಿವೆ. ಬಾನಹಳ್ಳಿ ಸುತ್ತಮುತ್ತ ಓಡಾಟ ನಡೆಸುತ್ತಿರುವ ಗಜಪಡೆಯನ್ನು ಮೊಬೈಲ್ ಗಳು ಸೆರೆ ಹಿಡಿದಿವೆ.
ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಬಾನಹಳ್ಳಿಯಲ್ಲಿ ಕಾಡಾನೆಗಳು ರೌಂಡ್ಸ್ ಹೊರಟಿವೆ. ಕೊರೋನಾ ಕಾರಣಕ್ಕೆ ಜನರ ಓಡಾಟ ಕಡಿಮೆಯಾಗಿದ್ದು ಕಾಡಾನೆಗಳು ಬಾನಹಳ್ಳಿ, ಭಾರತಿಭೈಲ್, ಬೆಳಗೋಡು ಸುತ್ತಮುತ್ತ ಮುಕ್ತ ಸಂಚಾರ ಮಾಡುತ್ತಿವೆ. ಆನೆಗಳನ್ನು ಕಾಡಿಗೆ ಓಡಿಸಲು ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಸ್ಫಳೀಯರು ಹರಸಾಹಸ ಮಾಡುತ್ತಿದ್ದಾರೆ.