Asianet Suvarna News Asianet Suvarna News

ಉಳ್ಳಾಲದಲ್ಲಿ ಮತಾಂತರ ಪ್ರಚೋದಿಸುವ ಪತ್ರಗಳು ಪತ್ತೆ, ಕೇರಳದಿಂದ ಫಂಡಿಂಗ್..?

ಮತಾಂತರಕ್ಕೆ ಪ್ರಚೋದಿಸುವ ಕ್ರೈಸ್ತ ಧರ್ಮ ಪ್ರಚಾರದ ಪತ್ರಗಳು  ಉಳ್ಳಾಲದಲ್ಲಿ ಪತ್ತೆಯಾಗಿವೆ. ಇದಕ್ಕೆ ಹಿಂದೂ ಸಂಘಟನೆಗಳು ಮತ್ತು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

Sep 25, 2021, 2:36 PM IST

ಮಂಗಳೂರು (ಸೆ. 25): ಮತಾಂತರಕ್ಕೆ ಪ್ರಚೋದಿಸುವ ಕ್ರೈಸ್ತ ಧರ್ಮ ಪ್ರಚಾರದ ಪತ್ರಗಳು  ಉಳ್ಳಾಲದಲ್ಲಿ ಪತ್ತೆಯಾಗಿವೆ. ಇದಕ್ಕೆ ಹಿಂದೂ ಸಂಘಟನೆಗಳು ಮತ್ತು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮತಾಂತರ ಮಾಡಲು ಬಂದ ಅಪರಿಚಿತನಿಗಾ ಹುಡುಕಾಟ ಮುಂದುವರೆದಿದೆ.

ಮತಾಂತರದ ಎಫೆಕ್ಟ್! ಹೊಸ ಮನೆ ಕಟ್ಟಿಸಿದರೂ, ಮನೆಗೆ ಕಾಲಿಡದ ಗೂಳಿಹಟ್ಟಿ ಶೇಖರ್ ಅಮ್ಮ!

ಉಳ್ಳಾಲ ಕೋಮುಸೂಕ್ಷ್ಮ ಪ್ರದೇಶ, ಕರಾವಳಿ ಭಾಗದ ಕ್ರೈಸ್ತ ಮಿಷನರಿಗಳು ಇದಕ್ಕೆ ಸಾಥ್ ನೀಡಿದ್ದಾರೆ. ಜೊತೆಗೆ ಕೇರಳ ಮೂಲದಿಂದ ಫಂಡಿಂಗ್ ಕೂಡಾ ನಡೆಯುತ್ತಿದೆ.  ಆದ್ದರಿಂದ ರೈಲಿನಲ್ಲಿ ಬಂದು ಧೈರ್ಯವಾಗಿ ಭಿತ್ತಿಪತ್ರ, ಪುಸ್ತಕ ಕೊಟ್ಟಿದ್ದಾರೆ‌. ಕೆಲವು ಕಡೆ ಚರ್ಚ್ ಗೆ ಪ್ರಾರ್ಥನೆಗೆ ಕರೆದಿದ್ದಾರೆ. ಆರೋಪಿಯನ್ನು ಬಂಧಿಸುವಂತೆ  ಸ್ಥಳೀಯರು ಪೊಲೀಸರಿಗೆ ಒತ್ತಾಯಪಡಿಸಿದ್ದಾರೆ. ಆರೋಪಿಯನ್ನು ಬಂಧಿಸದಿದ್ರೆ ಉಗ್ರ ಹೋರಾಟದ ಎಚ್ಚರಿಕೆ ನೀಡಿದೆ ಭಜರಂಗದಳ.