Asianet Suvarna News

ಬಿಜೆಪಿಗೆ ಶಾಕ್: ನಾನೇ ಟ್ರಬಲ್ ಶೂಟರ್ ಎಂದು ಪ್ರೂವ್ ಮಾಡಿದ ಡಿಕೆ ಶಿವಕುಮಾರ್..!

May 9, 2019, 8:19 PM IST

ರಾಜ್ಯದಲ್ಲಿ ಮೈತ್ರಿ ಸರ್ಕಾರ ರಚನೆಯಾದಗಿನಿಂದಲೂ ರಮೇಶ್ ಜಾರಕಿಹೊಳಿ ಮತ್ತು ಡಿ.ಕೆ.ಶಿವಕುಮಾರ್ ನಡುವೆ ಎಲ್ಲವೂ ಸರಿ ಇಲ್ಲ ಎಂಬುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಇಷ್ಟು ದಿನ ರಮೇಶ್ ಜಾರಕಿಹೊಳಿ ಬಣದಲ್ಲಿ ಪ್ರಬಲವಾಗಿ ಗುರುತಿಸಿಕೊಂಡಿದ್ದ ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಇಂದು ಕುಂದಗೋಳ ಉಪಚುನಾವಣೆ ಪ್ರಚಾರದಲ್ಲಿ ಕಾಣಿಸಿಕೊಂಡಿದ್ದಾರೆ. ಲೋಕಸಭಾ ಚುನಾವಣೆ ರಿಸಲ್ಟ್ ಬಳಿಕ ರಮೇಶ್ ಜಾರಕಿಹೊಳಿ ಹಾಗು ಟೀಮ್ ನಂಬಿಕೊಂಡು ಸರ್ಕಾರ ರಚಿಸುವ ಪ್ಲಾನ್ ಮಾಡಿದ್ದ ಬಿಜೆಪಿಗೆ ಆರಂಭದಲ್ಲಿಯೇ ಆಘಾತವಾಗಿದೆ.