Kodagu: ಘಮಘಮಿಸುತ್ತಿದೆ ಕಾಫಿ ಹೂ ಪರಿಮಳ, ಎಲ್ಲೆಡೆ ಶ್ವೇತಸುಂದರಿಯ ವಯ್ಯಾರ
- ಪ್ರವಾಸಿಗರನ್ನು ಸ್ವಾಗತಿಸುವುತ್ತಿರುವ ಶ್ವೇತ ವರ್ಣದ ಹೂಗಳು
- ಹೂದೋಟವಲ್ಲ ಕೊಡಗಿನಲ್ಲಿ ಈಗ ಕಾಫಿ ಹೂವಿನ ದರ್ಬಾರ್
- ಘಮಘಮಿಸುತ್ತಿದೆ ಕಾಫಿ ಹೂ ಪರಿಮಳ ಎಲ್ಲೆಡೆ ಶ್ವೇತಸುಂದರಿಯ ವಯ್ಯಾರ
ಕೊಡಗು (ಮಾ. 27)): ಜಿಲ್ಲೆಗೆ ಈಗ ಭೇಟಿ ನೀಡಿದರೆ ಪ್ರವಾಸಿಗರನ್ನು ಸ್ವಾಗತಿಸುವುದು ಶ್ವೇತ ವರ್ಣದ ಹೂಗಳು.ಆ ಶ್ವೇತ ಸುಂದರಿಯ ಮೈಮಾಟಕ್ಕೆ ಮಾರುಹೋಗದವರಿಲ್ಲ. ಹಾಗಂತ ಅದು ಯಾವುದೇ ಹೂತೋಟವಲ್ಲ. ಕೊಡಗು ಜಿಲ್ಲೆಯಲ್ಲಿ ಘಮಘಮಿಸುತ್ತಿದೆ ಕಾಫಿ ಹೂ ಪರಿಮಳ ಎಲ್ಲೆಡೆ ಶ್ವೇತಸುಂದರಿಯ ವಯ್ಯಾರ
ಎಲ್ಲಿ ನೋಡಿದರೂ ಶ್ವೇತವರ್ಣದಲ್ಲಿ ಕಂಗೊಳಿಸುತ್ತಿರುವ ಕಾಫಿ ತೋಟಗಳು. ಹೂ ಬಿಟ್ಟಿರುವ ಕಾಫಿ ತೋಟದಲ್ಲಿ ದುಂಬಿಗಳ ಜೇಂಕಾರ. ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿರುವ ಘಮಘಮಿಸುವ ಶ್ವೇತಸುಂದರಿ. ಈ ನಯನ ಮನೋಹರವಾದ ದೃಶ್ಯ ಕಾಣುತ್ತಿರುವುದು ಕಾಫಿ ನಾಡು ಕೊಡಗು ಜಿಲ್ಲೆಯಲ್ಲಿ. ರಾಜ್ಯದಲ್ಲಿ ಅತೀ ಹೆಚ್ಚು ಕಾಫಿ ಬೆಳೆಯುವ ಜಿಲ್ಲೆ ಅಂದರೆ ಅದು ಕೊಡಗು . ಇದೀಗ ಜಿಲ್ಲೆಯ ಎಲ್ಲೆಡೆ ಈಗ ಬಿಳಿಬಣ್ಣದ ಕಾಫಿ ಹೂಗಳದ್ದೇ ಕಾರುಬಾರು. ಕಳೆದ ಒಂದು ವಾರದ ಹಿಂದೆ ಜಿಲ್ಲೆಯ ಕೆಲವೆಡೆ ಅಲ್ಪಪ್ರಮಾಣದ ಮಳೆಯಾದರೆ ಉಳಿದೆಡೆ ಕೃತಕ ನೀರಾವರಿ ಮೂಲಕ ತೋಟಗಳಲ್ಲಿ ಕಾಫಿ ಹೂಗಳು ಅರಳುವಂತೆ ಮಾಡಲಾಗಿದೆ. ರಸ್ತೆಯಲ್ಲಿ ಸಂಚಾರ ಮಾಡಿದರೆ ಕಣ್ಣಿಗೆ ಕಾಣುವುದು ಈ ನಯನಮನೋಹರ ಕಾಫಿತೋಟಗಳು. ಇನ್ನೂ ಜಿಲ್ಲೆಗೆ ಆಗಮಿಸುವ ಪ್ರವಾಸಿಗರು ಸಂಚಾರ ಮಾಡುವಾಗಲೇ ರಸ್ತೆ ಇಕ್ಕಡೆಗಳಲ್ಲಿ ಕಾಣುವ ಹೂಗಳನ್ನು ನೋಡಿ ಆನಂದಿಸುತ್ತಿದ್ದಾರೆ.
ಕಾಫಿ ಹೂ ಅರಳಬೇಕಾದರೆ ಕನಿಷ್ಠ 50 ಸೆಂಟು ಮಳೆಯಾಗಬೇಕು. ಆದರೆ ಈ ವರ್ಷ ನಿರೀಕ್ಷಿತ ಮಟ್ಟದಲ್ಲಿ ಮಳೆಯಾಗಿಲ್ಲ. ಕೆಲವು ಬೆಳೆಗಾರರು ಕೃತಕ ನೀರು ಹಾಯಿಸುವುದರ ಮೂಲಕ ಹೂ ಅರಳುವಂತೆ ಮಾಡಿದ್ದಾರೆ. ಮಳೆಯಾಗಿದ್ದರೆ ಬೆಳೆಗಾರರಿಗೆ ಸಾಕಷ್ಟು ಖರ್ಚು ಕಡಿಮೆಯಾಗುತ್ತಿತ್ತು. ಮಳೆಯಾಗದ ಹಿನ್ನಲೆಯಲ್ಲಿ ಡೀಸೆಲ್ ದರ ಏರಿಕೆಯಿದ್ದರೂ ಕೂಡ ವಿಧಿಯಿಲ್ಲದೆ ನೀರು ಕೊಡುವ ಮೂಲಕ ಹೂ ಬರುವಂತೆ ಮಾಡಲಾಗಿದೆ