Asianet Suvarna News Asianet Suvarna News

ದಾವಣಗೆರೆ; ಗಣೇಶ ಮೂರ್ತಿ ಸುತ್ತಿಕೊಂಡು ದರ್ಶನ ನೀಡಿದ ಜೀವಂತ ನಾಗರ

Sep 12, 2021, 11:43 PM IST

ದಾವಣಗೆರೆ (ಸೆ. 12)  ಒಮ್ಮೊಮ್ಮೆ ಇಂಥ ಅಚ್ಚರಿಗಳನ್ನೇ ನಾವು ಪವಾಡ ಎಂದು ಕರೆಯಬಹುದು. ಗಣೇಶ ಮೂರ್ತಿ ಕೊರಳು -ಹೊಟ್ಟೆಗೆ ಜೀವಂತ ನಾಗರ ಸುತ್ತಿಕೊಂಡಿದ್ದು ಕತೆಯನ್ನು ನಿಜವಾಗಿಸಿತು.ದಾವಣಗೆರೆ ತಾಲ್ಲೂಕಿನ ಕೈದಾಳೆ ಗ್ರಾಮ ಅಚ್ಚರಿಗೆ ಸಾಕ್ಷಿಯಾಯಿತು.

ಸರ್ಪದಿಂದ ಕಚ್ಚಿಸಿ ಪತ್ನಿ ಕೊಲೆ.. ಪ್ರಕರಣದ ಮರುಸೃಷ್ಟಿ ನೋಡಿ

ಹೊಟ್ಟೆ, ಕೊರಳಿನ ಭಾಗಕ್ಕೆ ಸುತ್ತಿಕೊಂಡ ನಾಗರಹಾವಿನ ದರ್ಶನ ಪಡೆಯಲು ಜನರು ತಂಡೋಪ ತಂಡವಾಗಿ ಬಂದರು. ಸೋಶಿಯಲ್ ಮೀಡಿಯಾದಲ್ಲಿಯೂ ಇದು ದೊಡ್ಡ ಸುದ್ದಿಯಾಯಿತು. ಇಡೀ ರಾಜ್ಯವೇ ಗಣೇಶ ಹಬ್ಬದ ಸಂಭ್ರಮದಲ್ಲಿದೆ. ಸರ್ಕಾರ ಸಹ ಕೆಲ ನಿಯಮಗಳನ್ನು ಹಾಕಿ ಗಣೇಶೋತ್ಸವಕ್ಕೆ ಅವಕಾಶ ಮಾಡಿಕೊಟ್ಟಿದೆ.