Asianet Suvarna News Asianet Suvarna News

ಕಲ್ಯಾಣ ಕರ್ನಾಟಕಕ್ಕೆ ಬಂಪರ್‌ ಕೊಡುಗೆ ಘೋಷಿಸಿದ ಸಿಎಂ ಬೊಮ್ಮಾಯಿ

Sep 17, 2021, 12:09 PM IST

ಕಲಬುರಗಿ(ಸೆ.17): 73ನೇ ಕಲ್ಯಾಣ ಕರ್ನಾಟಕ ಉತ್ಸವಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು(ಶುಕ್ರವಾರ) ನಗರದಲ್ಲಿ ಚಾಲನೆ ನೀಡಿದ್ದಾರೆ. ಹೈದರಾಬಾದ್ ನಿಜಾಮರಿಂದ ಸ್ವಾತಂತ್ರ್ಯ ದೊರಕಿದ ದಿನವಾಗಿದೆ. ಹೀಗಾಗಿ ಸೆ.17 ರಂದು ವಿಮೋಚನಾ ದಿನವನ್ನ ಆಚರಣೆ ಮಾಡಲಾಗುತ್ತದೆ. ಇದೇ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕ ಬಂಪರ್ ಕೊಡುಗೆಯನ್ನ ಸಿಎಂ ಘೋಷಿಸಿದ್ದಾರೆ. ಅಭಿವೃದ್ಧಿ ಮಂಡಳಿಗೆ ಹೆಚ್ಚುವರಿಯಾಗಿ 1500 ಕೋಟಿ ರೂ. ಹಣವನ್ನ ನೀಡಲಾಗಿದೆ. ಈಗ ಬಿಡುಗಡೆ  ಮಾಡಿರುವ 1500 ಕೋಟಿ ರೂ. ಹಣವನ್ನ ಪೂರ್ಣ ರೀತಿಯಲ್ಲಿ ಬಳಸಿಕೊಳ್ಳಿ ಅಂತ ಸಿಎಂ ಬೊಮ್ಮಾಯಿ ಹೇಳಿದ್ದಾರೆ.

ವಿಜಯಪುರದಲ್ಲಿ ಮಕ್ಕಳ ಮಾರಾಟ ಜಾಲ ಸಕ್ರಿಯ..?