Asianet Suvarna News Asianet Suvarna News

55 ದಾಟಿದವರು ಇಲ್ಲಿ ಬದುಕುವುದೇ ಡೌಟಂತೆ, ಗ್ರಾಮಸ್ಥರನ್ನು ಬೆಚ್ಚಿ ಬೀಳಿಸಿದೆ ನಿಗೂಢ ಸಾವುಗಳು!

ಖಾಲಿಖಾಲಿ ಕಾಣುವ ಊರು, ಬೀಗ ಹಾಕಿರುವ ಮನೆಗಳು. ಭಯದಲ್ಲೇ ಬದುಕು‌ ನಡೆಸುತ್ತಿರುವ ಈ ಗ್ರಾಮದ ಜನರು. ಊರು ಖಾಲಿ‌ ಮಾಡಿ ಪಕ್ಕದೂರಿನಲ್ಲಿ ನೆಲೆಸಿರುವ ಜನರು. ಈ ದೃಶ್ಯಗಳು ಕಂಡು ಬಂದಿದ್ದು ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಚಿಕ್ಕೋಬನಹಳ್ಳಿ ಗ್ರಾಮದಲ್ಲಿ. 

First Published Jan 10, 2021, 12:57 PM IST | Last Updated Jan 10, 2021, 1:23 PM IST

ಚಿತ್ರದುರ್ಗ (ಜ. 10): ಖಾಲಿಖಾಲಿ ಕಾಣುವ ಊರು, ಬೀಗ ಹಾಕಿರುವ ಮನೆಗಳು. ಭಯದಲ್ಲೇ ಬದುಕು‌ ನಡೆಸುತ್ತಿರುವ ಈ ಗ್ರಾಮದ ಜನರು. ಊರು ಖಾಲಿ‌ ಮಾಡಿ ಪಕ್ಕದೂರಿನಲ್ಲಿ ನೆಲೆಸಿರುವ ಜನರು. ಈ ದೃಶ್ಯಗಳು ಕಂಡು ಬಂದಿದ್ದು ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಚಿಕ್ಕೋಬನಹಳ್ಳಿ ಗ್ರಾಮದಲ್ಲಿ. 

ಶಾಸಕರೇ ಇದೆಂಥಾ ಜನ ಸೇವೆ? ಅನುದಾನ ಹಂಚುವಾಗ ರಾಜಕೀಯ ಬೇಕೆ?

ಈ ಗ್ರಾಮದಲ್ಲಿ ಕೆಲ ಸಮಯಗಳಿಂದ ಚಿತ್ರ ವಿಚಿತ್ರ ಘಟನೆಗಳು ನಡೆಯುತ್ತಿವೆಯಂತೆ. ನಿಗೂಢ ಸಾವು, ಆತ್ಮಹತ್ಯೆ ನಡೆಯುತ್ತಿವೆಯಂತೆ. ಐವತ್ತೈದು ವರ್ಷ ದಾಟಿದ ವ್ಯಕ್ತಿಗಳು ಬದುಕುವುದೇ ಡೌಟ್ ಅಂತಾರೆ ಗ್ರಾಮಸ್ಥರು.. ಸುಮಾರು ಇಪತ್ತು ಕುಟುಂಬಗಳ ಜನರು ಈಗಾಗಲೇ ಮನೆಗೆ ಬೀಗ ಹಾಕಿ ಊರು ಖಾಲಿ ಮಾಡಿದ್ದಾರೆ. ಪಕ್ಕದೂರಾದ ಹೊಸೂರಿನಲ್ಲಿ ಕೆಲವರು ಬಾಡಿಗೆ ಮನೆ, ಕೆಲವರು ಸರ್ಕಾರಿ ಜಾಗದಲ್ಲಿ ಗುಡಿಸಲು ಹಾಕಿಕೊಂಡು ನೆಲೆಸಿದ್ದಾರೆ. ಏನಿದು ಸಮಸ್ಯೆ..? ನೋಡೋಣ ಬನ್ನಿ..!

Image : Designed by Freepic 

Video Top Stories