Asianet Suvarna News Asianet Suvarna News

ಅಬ್ಬಬ್ಬ.... ಅಧಿಕ ಬೆಲೆಗೆ ಮಾರಾಟವಾಗಿ ದಾಖಲೆ ಬರೆದ ಹೋರಿ..!

ಸಾಮಾನ್ಯವಾಗಿ ಒಂದು ಹೋರಿ ಎಷ್ಟು ಬೆಲೆಗೆ ಮಾರಾಟವಾಗುತ್ತೆ ಗೊತ್ತಾ. 50 ಸಾವಿರ 1 ಲಕ್ಷ ಅಥವಾ ಅಬ್ಬಬ್ಬಾ ಅಂದ್ರೆ 1.5 ಲಕ್ಷ ರೂಪಾಯಿ ಆದ್ರೆ ಇಲ್ಲೊಂದು  ಹೋರಿ ಸುಮಾರು 5.51 ಲಕ್ಷ ರೂಪಾಯಿಗೆ ಮಾರಾಟ ವಾಗುವುದರ ಮೂಲಕ ಅತಿ ಹೆಚ್ಚಿನ ಬೆಲೆಗೆ ಮಾರಾಟವಾಗಿ ದಾಖಲೆ ನಿರ್ಮಿಸಿದೆ. 

ಬೆಳಗಾವಿ (ಜ. 06): ಸಾಮಾನ್ಯವಾಗಿ ಒಂದು ಹೋರಿ ಎಷ್ಟು ಬೆಲೆಗೆ ಮಾರಾಟವಾಗುತ್ತೆ ಗೊತ್ತಾ. 50 ಸಾವಿರ 1 ಲಕ್ಷ ಅಥವಾ ಅಬ್ಬಬ್ಬಾ ಅಂದ್ರೆ 1.5 ಲಕ್ಷ ರೂಪಾಯಿ ಆದ್ರೆ ಇಲ್ಲೊಂದು  ಹೋರಿ ಸುಮಾರು 5.51 ಲಕ್ಷ ರೂಪಾಯಿಗೆ ಮಾರಾಟ ವಾಗುವುದರ ಮೂಲಕ ಅತಿ ಹೆಚ್ಚಿನ ಬೆಲೆಗೆ ಮಾರಾಟವಾಗಿ ದಾಖಲೆ ನಿರ್ಮಿಸಿದೆ. 

ಹೌದು ಬೆಳಗಾವಿ ಜಿಲ್ಲೆಯ ರಾಯಬಾಗ ತಾಲ್ಲೂಕಿನ ಹಾರೂಗೇರಿ ಪಟ್ಟಣದ ಕುರಬ ಗೋಡಿ ಎಂಬ ತೋಟದಲ್ಲಿ ಅಶೋಕ ಶ್ರೀಮಂತ ಕುರಿ ಎಂಬ ರೈತ ಸಾಕಿದ ಕಿಲಾರಿ ಜಾತಿಯ ಹೋರಿ ಐದು ಲಕ್ಷ ಐವತ್ತು ಸಾವಿರ ರೂಪಾಯಿಗೆ ಮಾರಾಟವಾಗಿದೆ. ಈ ಹೋರಿಗೆ ಕೇವಲ ಮೂರುವರೆ ವರ್ಷ ತುಂಬಿದೆ.

ಕರ್ನಾಟಕದಲ್ಲಿ ಹಕ್ಕಿ ಜ್ವರ ಭೀತಿ, ಚಿಕನ್ ತಿನ್ನಲು ಹೊಸ ನಿಯಮ ಜಾರಿ

ಈ ಹೋರಿ ಮಾರುವ ಮೂಲಕ ಕರ್ನಾಟಕ ಮಹಾರಾಷ್ಟ್ರ ಭಾಗದಲ್ಲಿ ಅತಿ ಹೆಚ್ಚು ಬೆಲೆಗೆ ಮಾರಾಟ ಮಾಡುವುದರ ಮೂಲಕ ದಾಖಲೆ ನಿರ್ಮಿಸಿದ್ದಾರೆ. ಈ ಹೋರಿಯನ್ನು ಬೆಳಗಾವಿ ಜಿಲ್ಲೆಯ ಪಾಶಾಪೂರ ಗ್ರಾಮದ ರೈತ ಬಸಲಿಂಗ ಬಸವಣ್ಣಿ ಅಂಬಲಿ ಎಂಬುವರು 5.51 ಲಕ್ಷಕ್ಕೆ ಖರೀದಿ‌ ಮಾಡಿದ್ದಾರೆ.

Video Top Stories