ಸಾಕ್ಷರತೆ ಪ್ರಮಾಣ ಹೆಚ್ಚಿಸಲು ಹೊಸ ಪ್ಲಾನ್: ಶೇ. 100 ರಷ್ಟು ಫಲಿತಾಂಶಕ್ಕಾಗಿ ಅವಿರತ ಪ್ರಯತ್ನ!
ಸಾಕ್ಷರತೆ ಪ್ರಮಾಣ ಹೆಚ್ಚಿಸಲು ವಿನೂತನ ಕಾರ್ಯಕ್ರಮ| ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಲ್ಲಿ ರಾತ್ರಿ ಶಾಲೆ ಆರಂಭ| ಶೇ. 100 ರಷ್ಟು ಫಲಿತಾಂಶಕ್ಕಾಗಿ ವಿನೂತನ ಪ್ರಯತ್ನಕ್ಕೆ ಕೈಹಾಕಿದ ಡಿಡಿಪಿಐ ಗಜಾನನ|
ಬೆಳಗಾವಿ(ಮಾ.07): ಸಾಕ್ಷರತೆ ಪ್ರಮಾಣ ಹೆಚ್ಚಿಸಲು ಜಿಲ್ಲೆಯ ಚಿಕ್ಕೋಡಿ ಡಿಡಿಪಿಐ ಗಜಾನನ ಅವರು ವಿನೂತನ ಪ್ರಯತ್ನವೊಂದನ್ನ ಮಾಡಿದ್ದಾರೆ. ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗಾಗಿ ರಾತ್ರಿ ಶಾಲೆಗಳನ್ನ ಆರಂಭಿಸಿದ್ದಾರೆ. ಈ ಶಾಲೆಯಲ್ಲಿ ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗಾಗಿ ವಿಶೇಷ ತರಬೇತಿ ನೀಡಲಾಗುತ್ತಿದೆ.
ಶೇ. 100 ರಷ್ಟು ಫಲಿತಾಂಶಕ್ಕಾಗಿ ಡಿಡಿಪಿಐ ಗಜಾನನ ಅವರು ವಿನೂತನ ಪ್ರಯತ್ನಕ್ಕೆ ಕೈಹಾಕಿದ್ದಾರೆ. ಇವರ ಕಾರ್ಯಕ್ಕೆ ಶಿಕ್ಷಕ ವೃಂದದಿಂದಲೂ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಈ ಸುದ್ದಿಯ ಕಂಪ್ಲೀಟ್ ಮಾಹಿತಿ ಈ ವಿಡಿಯೋದಲ್ಲಿದೆ.