ಅರಣ್ಯ ಇಲಾಖೆ ಕಿರುಕುಳ, ದಯಾಮರಣಕ್ಕೆ ವೃದ್ಧ ದಂಪತಿ ಅರ್ಜಿ, PMO ಯಿಂದ ಸ್ಪಂದನೆ
ಚಿಕ್ಕಮಗಳೂರು ಜಿಲ್ಲೆ, ಮೂಡಿಗೆರೆ ತಾ. ಕೆ ದುರ್ಗಾ ಗ್ರಾಮದ ರಾಮೇಗೌಡ ದಂಪತಿ ಕಳೆದ 15 ವರ್ಷಗಳಿಂದ ಇಲ್ಲಿ 15 ಎಕರೆ ಜಮೀನು ಮಾಡಿಕೊಂಡಿದ್ದರು. ಅರಣ್ಯ ಇಲಾಖೆ ಈ ಜಮೀನು ನಮ್ಮದು ಅಂತ 10 ಎಕರೆ ಜಮೀನನ್ನು ವಶಪಡಿಸಿಕೊಂಡು 5 ಎಕರೆ ಜಮೀನನ್ನು ಮಾತ್ರ ಉಳಿಸಿದೆ.
ಚಿಕ್ಕಮಗಳೂರು (ಫೆ. 1): ಅರಣ್ಯ ಇಲಾಖೆಯ ಕಿರುಕುಳದಿಂದ ನೊಂದ ವೃದ್ದ ದಂಪತಿಯೊಬ್ಬರು ದಯಾಮರಣಕ್ಕೆ ಅರ್ಜಿ ಸಲ್ಲಿಸಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.
ಮೂಡಿಗೆರೆ ತಾ. ಕೆ ದುರ್ಗಾ ಗ್ರಾಮದ ರಾಮೇಗೌಡ ದಂಪತಿ ಕಳೆದ 15 ವರ್ಷಗಳಿಂದ ಇಲ್ಲಿ 15 ಎಕರೆ ಜಮೀನು ಮಾಡಿಕೊಂಡಿದ್ದರು. ಅರಣ್ಯ ಇಲಾಖೆ ಈ ಜಮೀನು ನಮ್ಮದು ಅಂತ 10 ಎಕರೆ ಜಮೀನನ್ನು ವಶಪಡಿಸಿಕೊಂಡು 5 ಎಕರೆ ಜಮೀನನ್ನು ಮಾತ್ರ ಉಳಿಸಿದೆ.
ಈ ಜಾಗದಲ್ಲಿ ಕಾಫಿ, ಅಡಕೆ, ಮೆಣಸನ್ನು ಬೆಳೆದಿದ್ದರು. ಈಗ ಈ ಜಮೀನನ್ನೂ ಅರಣ್ಯ ಇಲಾಖೆ ವಶಪಡಿಸಿಕೊಳ್ಳಲು ಮುಂದಾಗಿದ್ದು ದಂಪತಿ ಕಂಗಾಲಾಗಿ ದಯಾಮರಣಕ್ಕೆ ಅರ್ಜಿ ಸಲ್ಲಿಸಿದ್ಧಾರೆ. ಪ್ರಧಾನಿ ಕಚೇರಿಯಿಂದ ದಂಪತಿ ಪತ್ರಕ್ಕೆ ಸ್ಪಂದನೆ ಸಿಕ್ಕಿದೆ. ವೃದ್ಧ ದಂಪತಿ ನೆರವಿಗೆ ಬರುತ್ತಾ ಜಿಲ್ಲಾಡಳಿತ..?