Asianet Suvarna News Asianet Suvarna News

Dog Missing Case : ನಮ್ಮ ನಾಯಿ ಹುಡುಕಿ ಕೊಡಿ - ಮಾಲೀಕರಿಂದ ಪೊಲೀಸರ ಮೊರೆ

Dec 2, 2021, 12:12 PM IST
  • facebook-logo
  • twitter-logo
  • whatsapp-logo

ಚಿಕ್ಕಮಗಳೂರು (ಡಿ.02): ಬೀದಿ ಬೀದಿಯಲ್ಲಿ ಪೋಟೋ ಹಿಡಿದು ಮಾಲಿಕರು ನಾಯಿ (Dog) ಹುಡುಕಾಟ ನಡೆಸುತ್ತಿದ್ದಾರೆ.  ಗೋಡೆ, ಮರದ ಮೇಲೆ ಕಾಣೆ ಆಗಿರುವ ಭಿತ್ತಿ ಪತ್ರ  ಅಂಟಿಸಿದ್ದಾರೆ.  ಚಿಕ್ಕಮಗಳೂರಿನ (chikkamagaluru) ಲಕ್ಯಾ ಗ್ರಾಮದ ನಿವಾಸಿ ಆಗಿರುವ ಜೈ ರಾಜ್ ಬಲು ಪ್ರೀತಿಯಿಂದ ಶ್ವಾನವನ್ನು ಸಾಕಿದ್ದರು. ಸಣ್ಣ ಮರಿಯಿಂದ  ಜರ್ಮನ್ ಶಫರ್ಡ್ ಶ್ವಾನವನ್ನು ಸಾಕಿದ್ದರು ಜೈರಾಜ್. ಮನೆಯಲ್ಲಿ ಒಬ್ಬ ಸದಸ್ಯನಂತೆ ಇದ್ದ ನಾಯಿ  ಇದೀಗ ಕಾಣೆ ಆಗಿದ್ದು ಅದಕ್ಕಾಗಿ ಪೊಲೀಸರ  ಮೊರೆ ಹೋಗಿದ್ದಾರೆ. 

Animal Cruelty: ಮಗನನ್ನು ಕಚ್ಚಿದ ನಾಯಿಗೆ ಇದೆಂತಹಾ ಘೋರ ಶಿಕ್ಷೆ, ಕಾಲು ಕತ್ತರಿಸಿ ಕೊಂದೇ ಹಾಕಿದ!
 
 ಕಳೆದ 10-12 ದಿನಗಳ ಹಿಂದೆ ಸಂಜೆ ಸಮಯದಲ್ಲಿ ಮನೆಯಲ್ಲೇ ಇದ್ದ ಗೋಲು ಗೇಟ್ ಹತ್ತಿರ ಹೋಗಿತ್ತು. ಜೈರಾಜ್ ಕೂಡ ಅಲ್ಲಿಯೇ ಇದ್ದರು, ಪೋನ್  ಬಂದ ಕಾರಣ ಜೈ ರಾಜ್ ಮನೆ ಒಳಗೆ ಹೋಗಿದ್ದಾರೆ, ಬಂದು ನೋಡುವ ಅಷ್ಟೇರಲ್ಲಿ ಪ್ರೀತಿ ಗೂಲು ನಾಪತ್ತೆ, ಸುತ್ತಮುತ್ತ ಹುಡುಕಾಟ ನಡೆಸಿದ್ದರೂ ಸುಳಿವು ಇಲ್ಲ,  .ಪ್ರೀತಿ ಗೋಲುವನ್ನು ನಿತ್ಯ ಹುಡುಕಾಟ ನಡೆಸುತ್ತಿದ್ದಾರೆ ಮನೆಯುವರು.ಅವನ ಸುಳಿವಿಗಾಗಿ ಜೈರಾಜ್ ಪೊಲೀಸ್ ಠಾಣೆ (Police station) ಕದತಟ್ಟಿದ್ದಾರೆ. ಗ್ರಾಮಾಂತರ ಠಾಣೆಗೆ ದೂರು ನೀಡಿ ಬೀದಿ ಬೀದಿಯಲ್ಲಿ ಶ್ವಾನಕ್ಕಾಗಿ ಹುಡುಕಾಟ ನಡೆಸುತ್ತಿದ್ದಾರೆ. ಮುದ್ದಾದ ಗೋಲು ಪೋಟೋ ಹಾಕಿ ಬೀದಿ ಬೀದಿಗಳಲ್ಲಿ ಭಿತ್ತಿಪತ್ರವನ್ನು ಅಂಟಿಸಿ ಕಾಣೆ ಆಗಿರುವ ಶ್ವಾನದ ಮಾಹಿತಿ ನೀಡಿದವರಿಗೆ  ಬಹುಮಾನ ಕೊಡುವುದಾಗಿ ತಿಳಿಸಿದ್ದಾರೆ. ಅಲ್ಲದೆ ಶ್ವಾನದ ಹುಡುಕಾಟಕ್ಕೆ ಸಾಮಾಜಿಕ ಜಾಲ ತಾಣದ ಮೊರೆಯೂ ಹೋಗಿದ್ದಾರೆ. 

Video Top Stories