Asianet Suvarna News Asianet Suvarna News

ಚಿಕ್ಕಮಗಳೂರು; ಲೇಔಟ್ ನಿರ್ಮಾಣ ಭೂಸ್ವಾಧೀನಕ್ಕೆ ರೈತರ ವಿರೋಧ

* ಹೊಸ ಬಡಾವಣೆ ನಿರ್ಮಿಸಲು ಮುಂದಾಗಿರುವ ಚಿಕ್ಕಮಗಳೂರು ನಗರಾಭಿವೃದ್ಧಿ ಪ್ರಾಧಿಕಾರ
* ಕೃಷಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆಗೆ ರೈತರಿಂದ ವಿರೋಧ
* ನೀಲನಕ್ಷೆಯನ್ನು ತಯಾರಿಸಿ ರೈತರೊಂದಿಗೆ ಮಾತುಕತೆ; ಆದರೆ ಭೂಸ್ವಾಧೀನಕ್ಕೆ ಆಕ್ಷೇಪ
* ವರ್ಷಕ್ಕೆ ಎರಡು ಬಾರಿ ಅಡಿಕೆ ಸೇರಿದಂತೆ ಅನೇಕ ಬೆಳೆಗಳನ್ನು ತೆಗೆಯುತ್ತಿರುವ ರೈತರು
* ಬಡಾವಣೆ ನಿರ್ಮಿಸುವ ಉದ್ದೇಶದ ಹಿಂದೆ ಭೂಮಾಫಿಯಾದ ಕೈವಾಡ ಆರೋಪ

ಚಿಕ್ಕಮಗಳೂರು( ಸೆ. 01)  ಚಿಕ್ಕಮಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಹೊಸದಾಗಿ ಬಡಾವಣೆ ನಿರ್ಮಿಸಲು ಉದ್ದೇಶಿಸಿ ಇದಕ್ಕಾಗಿ ರೈತರ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆಗೆ ಇದೀಗ ವಿರೋಧ ವ್ಯಕ್ತವಾಗಿದೆ. ಸುಮಾರು ಮೂರು ಕಿಲೋಮೀಟರ್ ದೂರದಲ್ಲಿರುವ ಚಿಕ್ಕಕುರುಬರಹಳ್ಳಿ, ಬಿಳಿಕಲ್ಲು ಸೇರಿದಂತೆ ಕುರುವಂಗಿಯಲ್ಲಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ನಗರಾಭಿವೃದ್ಧಿ ಪ್ರಾಧಿಕಾರ ಮುಂದಾಗಿದೆ. ಈ ನಿಟ್ಟಿನಲ್ಲಿ ನೀಲನಕ್ಷೆಯನ್ನು ತಯಾರಿಸಿ ರೈತರೊಂದಿಗೆ ಮಾತುಕತೆ ನಡೆಸಿದೆ.

ಬೆಂಗಳೂರು ಬಿಂಗಿಪುರ ಕೆರೆಗೆ ಹೊಸ ಚೈತನ್ಯ

ಇದರ ಬೆನ್ನಲ್ಲೇ ಭೂಸ್ವಾಧೀನಕ್ಕೆ ಆಕ್ಷೇಪಗಳು ವ್ಯಕ್ತವಾಗಿದೆ. ಈ ಭೂಮಿಯಲ್ಲಿ ಅಡಿಕೆ ಸೇರಿದಂತೆ ಅನೇಕ ಬೆಳೆಗಳನ್ನು ವರ್ಷಕ್ಕೆ ಎರಡು ಬಾರಿ ತೆಗೆಯುತ್ತಿದ್ದು ರೈತರು ನೆಮ್ಮದಿಯಿಂದ ಇದ್ದಾರೆ ಎಂದು ಪ್ರತಿಭಟನಾನಿರತರು ಪ್ರತಿಪಾದಿಸಿದ್ದಾರೆ. ನಗರದ ಅಜಾದ್ ಪಾರ್ಕ್ ನಲ್ಲಿ ಸರ್ವಪಕ್ಷಗಳ ನೇತೃತ್ವದಲ್ಲಿ ರೈತರು ಅಡಿಕೆ ಸಸಿಗಳನ್ನು ಪ್ರದರ್ಶನ ಮಾಡಿ ಆಕ್ರೋಶವನ್ನು ಹೊರಹಾಕಿದರು. ಪ್ರಾಧಿಕಾರದಿಂದ ಬಡಾವಣೆ ನಿರ್ಮಿಸುವ ಉದ್ದೇಶದ ಹಿಂದೆ ಭೂಮಾಫಿಯಾದ ಕೈವಾಡವಿದ್ದು ಕೃಷಿ ವಿಸ್ತರಣೆ ಬಗ್ಗೆ ಮಾತನಾಡುತ್ತಲೇ ಇನ್ನೊಂದೆಡೆ   ರೈತರ ಭೂಮಿಯನ್ನು ಕಸಿದುಕೊಳ್ಳುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.

 

 

Video Top Stories