Big 3 Imapact: ಸಿಡಿಲು ಬಡಿದು ಮನೆ ಕಳೆದುಕೊಂಡ ರೈತ, ಸಂತ್ರಸ್ತನ ನೆರವಿಗೆ ಧಾವಿಸಿದ ತಾಲೂಕಾಡಳಿತ

ದಾವಣಗೆರೆ ಜಿಲ್ಲೆಯ ಚನ್ನಗಿರಿಯ ಶಿವಪ್ಪ ಮನೆಗೆ ಸಿಡಿಲು ಬಡಿದ ಪ್ರಕರಣ| ಈ ಬಗ್ಗೆ ವರದಿ ಪ್ರಸಾರ ಮಾಡಿದ್ದ ಸುವರ್ಣ ನ್ಯೂಸ್‌| ವರದಿ ಬಳಿಕ ಎಚ್ಚೆತ್ತ ತಾಲೂಕಾಡಳಿತ|

First Published Feb 5, 2020, 3:46 PM IST | Last Updated Feb 5, 2020, 3:46 PM IST

ದಾವಣಗೆರೆ(ಫೆ.05): ದಾವಣಗೆರೆ ಜಿಲ್ಲೆಯ ಚನ್ನಗಿರಿಯ ಶಿವಪ್ಪ ಮನೆಗೆ ಸಿಡಿಲು ಬಡಿದು ಮೆನ ಕಳೆದುಕೊಂಡ ರೈತನ ಬಗ್ಗೆ ವರದಿಯನ್ನ ಸುವರ್ಣ ನ್ಯೂಸ್‌ ಪ್ರಸಾರ ಮಾಡಿತ್ತು. ಈ ಸುದ್ದಿ ಪ್ರಸಾರವಾಗುತ್ತಿದ್ದಂತೆ ಎಚ್ಚೆತ್ತ ಚನ್ನಗಿರಿ ತಾಲೂಕಾಡಳಿತ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ 2 ಲಕ್ಷ ರು. ಪರಿಹಾರವನ್ನ ಬಿಡುಗಡೆ ಮಾಡಿದೆ. 
1.50 ಲಕ್ಷ ರು. ವೆಚ್ಚದ ಮನೆಯನ್ನ ಕಟ್ಟಿಸಿಕೊಡುವುದಾಗಿ ಚನ್ನಗಿರಿ ತಾಲೂಕಿನ ತಹಶೀಲ್ದಾರ್‌ ನಾಗರಾಜ್‌ ಅವರು ಭರವಸೆ ನೀಡಿದ್ದಾರೆ. ಇದರೊಂದಿಗೆ ಶಿವಪ್ಪ ಅವರು ನಿಟ್ಟುಸಿರು ಬಿಡುವಂತಾಗಿದೆ. ಈ ಬಗ್ಗೆ ವರದಿ ಪ್ರಸಾರ ಮಾಡಿದ ಸುವರ್ಣ ನ್ಯೂಸ್‌ಗೆ ಶಿವಪ್ಪ ಅವರು ಧನ್ಯವಾದ ತಿಳಿಸಿದ್ದಾರೆ. 
 

Video Top Stories