ಸೋಮಣ್ಣ ನನಗೆ ಸೈಟ್ ಕೊಟ್ಟ ಪುಣ್ಯಾತ್ಮ: ಅವರು ಕಪಾಳಮೋಕ್ಷ ಮಾಡಿಲ್ಲ ಎಂದ ಮಹಿಳೆ
ಸಚಿವ ವಿ. ಸೋಮಣ್ಣ ಮಹಿಳೆಗೆ ಕಪಾಳಮೋಕ್ಷ ಮಾಡಿರುವ ಪ್ರಕರಣ ಇದೀಗ ಉಲ್ಟಾ ಆಗಿದ್ದು, ಸಚಿವರು ನನಗೆ ಹೊಡೆದಿಲ್ಲ ಎಂದು ಮಹಿಳೆ ಸ್ಪಷ್ಟನೆ ನೀಡಿದ್ದಾರೆ.
ನನಗೂ ಒಂದು ಸೈಟ್ ಕೊಡಿ ಎಂದು ನಾನು ಸಚಿವರ ಕಾಲಿಗೆ ಬಿದ್ದೆ, ಆಗ ಸಚಿವರು ನನ್ನನ್ನು ಎತ್ತಿ ಕ್ಷಮೆ ಕೇಳಿ ಸಮಾಧಾನ ಪಡಿಸಿದರು. ಸಚಿವರು ನನಗೆ ಹೊಡೆಯಲಿಲ್ಲ, ಆದರೆ ಅವರು ನನಗೆ ಹೊಡೆದರು ಎಂದು ಅವರ ಮೇಲೆ ತಪ್ಪು ಅಪವಾದ ಹೊರಿಸಿದ್ದಾರೆ ಎಂದು ತಿಳಿಸಿದ್ದಾರೆ. ಸೈಟಿಗೆಂದು ಕೊಟ್ಟಿದ್ದ ನಾಲ್ಕು ಸಾವಿರ ರೂಪಾಯಿಯನ್ನು ಅವರು ವಾಪಸ್ ಕೊಡಿಸಿದ್ದಾರೆ. ಸಚಿವರು ನನಗೆ ಸೈಟ್ ಕೊಡ್ಸಿ, ನನ್ನ ಮಕ್ಕಳಿಗೆ ದಾರಿ ತೋರ್ಸಿ ಒಳ್ಳೆಯದು ಮಾಡಿದ್ದಾರೆ ಎಂದು ತಿಳಿಸಿದ್ದಾರೆ.