ಚಾಮರಾಜನಗರಕ್ಕೆ ಕೊರೋನಾ ವಕ್ರದೃಷ್ಟಿ, ಮದುವೆಗೆ ಬಂದಿದ್ರು ಅಧಿಕಾರಿ!
ಗ್ರೀನ್‌ಝೋನ್ ಜಿಲ್ಲೆ ಚಾಮರಾಜನಗರದಲ್ಲೂ ಕೊರೋನಾ ಭಯ| ಮಂಡ್ಯ ಜಿಲ್ಲೆಯ ನಂಜನಗೂಡಿನಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಭಾಗಿಯಾಗಿದ್ದ ಕೊರೋನಾ ಸೋಂಕಿತ ಅಧಿಕಾರಿ|
ಚಾಮರಾಜನಗರ(ಮೇ.22): ಗ್ರೀನ್‌ಝೋನ್ ಜಿಲ್ಲೆ ಚಾಮರಾಜನಗರದಲ್ಲೂ ಇದೀಗ ಮಾರಕ ಕೊರೋನಾ ವೈರಸ್ ಆತಂಕ ಎದುರಾಗಿದೆ. ಹೌದು, ಜಿಲ್ಲೆಯ ಕವಲೆಂದೆ ಬಳಿ ಹೆಳವರ ಹುಂಡಿ ಗ್ರಾಮದಲ್ಲಿ ಮದುವೆ ನಡೆದಿತ್ತು. ಈ ಮದುವೆಯಲ್ಲಿ ಮಂಡ್ಯ ಜಿಲ್ಲೆಯ ನಂಜನಗೂಡಿನ ಕೊರೋನಾ ಸೋಂಕಿತ ಅಧಿಕಾರಿ ಭಾಗಿಯಾಗಿದ್ದರು.
ಪೊಲೀಸರಿಂದ ಕಾಟಾಚಾರದ ಚೆಕ್; ಬೆಂಗಳೂರಿಗೆ ತಮಿಳುನಾಡಿನ ಡೆಡ್ಲಿ ವೈರಸ್ ಎಂಟ್ರಿ..!
ಮಂಡ್ಯದ ಕೊರೋನಾ ಅಧಿಕಾರಿ ವಧುವಿನ ಸಂಬಂಧಿಯಾಗಿದ್ದರು. ಹೀಗಾಗಿ ಮದುವೆಯಲ್ಲಿ ಭಾಗಿಯಾಗಿದ್ದರು. ಇದೀಗ ಚಾಮರಾಜನಗರ ಜಿಲ್ಲೆಯಲ್ಲೂ ಕೊರೋನಾ ಆತಂಕ ಶುರುವಾಗಿದೆ.