Asianet Suvarna News Asianet Suvarna News

ಬಂಡೆ ಆಪ್ತನಿಗೆ ಸಿಬಿಐ ನೋಟಿಸ್: ಡಿಕೆ ಶಿವಕುಮಾರ್‌ಗೆ ಮತ್ತೆ ಸಂಕಷ್ಟ?

ಡಿ.ಕೆ. ಶಿವಕುಮಾರ್ ಆಪ್ತ ವಿಜಯ್ ಮುಳಗುಂದ ಅವರಿಗೆ ಸಿಬಿಐ ನೊಟೀಸ್ ಜಾರಿ ಮಾಡಿದ್ದು, ಕೆಪಿಸಿಸಿ ಅಧ್ಯಕ್ಷರಿಗೆ ಮತ್ತೆ ಸಂಕಷ್ಟ ಎದುರಾಗಿದೆ.

First Published Aug 26, 2022, 5:45 PM IST | Last Updated Aug 26, 2022, 5:45 PM IST

ಕಾಂಗ್ರೆಸ್ ನಾಯಕ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆಪ್ತ ವಿಜಯ್ ಮುಳಗುಂದ ಅವರಿಗೆ ಸಿಬಿಐ ನೋಟೀಸ್ ಜಾರಿ ಮಾಡಿದೆ. ಕರ್ನಾಟಕ ಪ್ರದೇಶ ಕಾಂಗ್ರೆಸ್‌ನ ಜನರಲ್ ಸೆಕ್ರೆಟರಿಯೂ ಆಗಿರುವ ವಿಜಯ್‌ ಮುಳಗುಂದ ಅವರಿಗೆ ಸಿಬಿಐ ನೋಟಿಸ್ ಜಾರಿ ಮಾಡುತ್ತಿದ್ದಂತೆ ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್, ಕೇವಲ ವಿಜಯ್‌ ಮುಳಗುಂದ ಮಾತ್ರವಲ್ಲ ನನ್ನೊಂದಿಗೆ ವ್ಯವಹಾರ ಮಾಡುತ್ತಿರುವ 30ರಿಂದ 40 ಜನರಿಗೆ ನೋಟೀಸ್ ನೀಡಲಾಗಿದೆ ಎಷ್ಟು ಅಂತ ಟಾರ್ಚರ್ ಕೊಡ್ತಾರೋ ಕಿರುಕುಳ ಕೊಡುವುದಕ್ಕೂ ಒಂದು ಲಿಮಿಟ್ ಇರಬೇಕು ಎಂದು ಹೇಳಿದ್ದಾರೆ. ಮಂತ್ರಿಗಳದ್ದೂ ವ್ಯವಹಾರ ತನಿಖೆ ಮಾಡಿಸಿ ನೋಡೋಣ, ಶಾಸಕರಾಗಿದ್ದಾಗ ಎಷ್ಟಿತ್ತು ಈಗ ಮಂತ್ರಿಗಳಾದಾಗ ಎಷ್ಟಿದೆ ತನಿಖೆ ಮಾಡಿಸಿ. ಅವರೆಲ್ಲ ಬೆಳ್ಳುಳ್ಳಿ ಅಡಿಕೆ ಬೆಳೆದು ಆಸ್ತಿ ಮಾಡಿದ್ರಾ ಎಂದು ಪ್ರಶ್ನಿಸಿದ್ದಾರೆ. 
 

Video Top Stories