ಯಾದಗಿರಿ: ಜನ ಆಯ್ತು ಈಗ ಜಾನುವಾರುಗಳಿಗೂ ಕ್ವಾರಂಟೈನ್..!
ಕೊರೋನಾ ಜೊತೆಗೆ ರೈತರಿಗೆ ತಲೆನೋವಾದ ಮತ್ತೊಂದು ರೋಗ| ಲಂಪಿ ಚರ್ಮ ಕಾಯಿಲೆ ರೋಗ ಪೀಡಿತ ಜಾನುವಾರುಗಳಿಂದ ಬೇರೆ ಜಾನುವಾರುಗಳಿಗೆ ಹರಡುತ್ತದೆ| ಜಾನುವಾರುಗಳನ್ನು ಪ್ರತ್ಯೇಕವಾಗಿ ಇರಿಸಿ ಚಿಕಿತ್ಸೆ| ಲಂಪಿ ಕಾಯಿಲೆಗೆ ಯಾವುದೇ ಔಷಧವಿಲ್ಲ| ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಔಷಧ ಹಾಗೂ ಪ್ರತ್ಯೇಕವಾಗಿರಿಸಲು ಸಲಹೆ|
ಯಾದಗಿರಿ(ಆ.30): ಜನ ಆಯ್ತು ಇದೀಗ ಜಾನುವಾರುಗಳಿಗೂ ಸಹ ಕ್ವಾರಂಟೈನ್ ಮಾಡಲಾಗುತ್ತಿದೆ. ಇಂತದದೊಂದು ಘಟನೆ ನಡೆದಿರುವುದು ಜಿಲ್ಲೆಯಲ್ಲಿ ನಡೆದಿದೆ. ಲಂಪಿ ಚರ್ಮ ಕಾಯಿಲೆ ಇದೀಗ ಜಿಲ್ಲೆಯ ಜಾನುವಾರುಗಳಿಗೆ ಅಂಟಿದೆ. ರೋಗ ಪೀಡಿತ ಜಾನುವಾರುಗಳಿಂದ ಬೆರೆ ಜಾನುವಾರುಗಳಿಗೆ ಹರಡುವ ಕಾಯಿಲೆಯಾಗಿದೆ.
ಬೆಳಗಾವಿಯಲ್ಲಿ ಮುಸ್ಲಿಂ ಯುವಕರಿಂದ ಹಿಂದೂ ವ್ಯಕ್ತಿಯ ಅಂತ್ಯಕ್ರಿಯೆ
ಈಗಾಗಲೇ ಜಿಲ್ಲೆಯ ಒಂದು ಸಾವಿರಕ್ಕೂ ಹೆಚ್ಚು ಜಾನುವಾರುಗಳಲ್ಲಿ ಲಂಪಿ ಚರ್ಮ ಕಾಯಿಲೆ ಪತ್ತೆಯಾಗಿದೆ. ಬಹಳ ವರ್ಷಗಳ ನಂತರ ಮೂಕ ಪ್ರಾಣಿಗಳಿಗೆ ಲಂಪಿ ಚರ್ಮ ಕಾಯಿಲೆ ವ್ಯಾಪಿಸಿದೆ. ಹೀಗಾಗಿ ಜಮೀನು ಹಾಗೂ ಮನೆಯಲ್ಲಿ ರೋಗ ಪೀಡಿತ ಜಾನುವಾರುಗಳಿಗೆ ಕ್ವಾರಂಟೈನ್ ಮಾಡಲಾಗುತ್ತಿದೆ.