BIG 3: ಉದ್ಘಾಟನೆ ಭಾಗ್ಯ ಕಾಣದ ಕಂಪ್ಲಿ ರೈತ ಸಂಪರ್ಕ ಕೇಂದ್ರ: ರೈತರ ಆಕ್ರೋಶ
ಬಳ್ಳಾರಿ ಜಿಲ್ಲೆಯ ಕಂಪ್ಲಿಯ ರೈತ ಸಂಪರ್ಕ ಕೇಂದ್ರದ ಕಟ್ಟಡ ಉದ್ಘಾಟನೆಯಾಗಿಲ್ಲ. ಆದಷ್ಟು ಬೇಗ ಉದ್ಘಾಟಿಸಿಸಲು ರೈತರು ಆಗ್ರಹಿಸಿದ್ದಾರೆ.
ಬಳ್ಳಾರಿ: ಬಳ್ಳಾರಿ ಜಿಲ್ಲೆಯ ಕಂಪ್ಲಿಯ ರೈತ ಸಂಪರ್ಕ ಕೇಂದ್ರದ ಕಟ್ಟಡವನ್ನು, 2017-18ನೇ ಸಾಲಿನ ಕೃಷಿ ಇಲಾಖೆಯ ಆರ್'ಐಡಿಎಫ್ 23ನೇ ಯೋಜನೆಯಡಿ ಐವತ್ತು ಲಕ್ಷ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ಆದರೆ ಇದರ ಉದ್ಘಾಟನೆಗೆ ಮಾತ್ರ ಕೃಷಿ ಇಲಾಖೆಯ ಅಧಿಕಾರಿಗಳು ಮನಸ್ಸು ಮಾಡ್ತಿಲ್ಲ. ಯಾಕೆ ಅನ್ನೋ ಪ್ರಶ್ನೆಗೆ ಸೂಕ್ತ ಉತ್ತರ ಯಾರ ಬಳಿಯೂ ಇಲ್ಲ. ಇದೇ ಕೇಂದ್ರ ಇದೀಗ ಹತ್ತು ಸಾವಿರ ಕೊಟ್ಟು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದೆ. ಸ್ವಂತ ಕಟ್ಟಡ ಇದ್ರೂ ಬಾಡಿಕೆ ಕಟ್ಟಡದಲ್ಲಿ ಯಾಕೆ ಅನ್ನೋದು ರೈತರ ಪ್ರಶ್ನೆಯಾಗಿದೆ. ಬರೋಬ್ಬರಿ ಐವತ್ತು ಲಕ್ಷ ಖರ್ಚು ಮಾಡಿ ಕಟ್ಟಡ ನಿರ್ಮಾಣ ಮಾಡಿದ್ರೂ, ಉದ್ಘಾಟನೆ ಭಾಗ್ಯವಿಲ್ಲ. ಅಧಿಕಾರಿಗಳನ್ನು ಕೇಳಿದ್ರೇ ಕೃಷಿ ಸಚಿವರ ಮತ್ತು ಜಿಲ್ಲಾ ಉಸ್ತವಾರಿ ಸಚಿವರ ಡೇಟ್ ಸಿಕ್ತಿಲ್ಲ ಎನ್ನುತ್ತಿದ್ದಾರಂತೆ. ಇದೀಗ ಈ ಕಟ್ಟಡವನ್ನು ಆದಷ್ಟು ಬೇಗ ಉದ್ಘಾಟಿಸಲು ರೈತರು ಆಗ್ರಹಿಸಿದ್ದಾರೆ.