Asianet Suvarna News Asianet Suvarna News

ಬದುಕಲ್ಲಿ ಹಣ ಬೇಕು, ಪ್ರೀತಿ ಇರಬೇಕು ಪ್ರಧಾನಿ ಭೇಟಿ ಮಾಡಿದ್ದು ಖುಷಿ ನೀಡಿದೆ: ಬೊಮ್ಮನ್ ಬೆಳ್ಳಿ ದಂಪತಿ

ಪ್ರಧಾನಿ ನಮ್ಮನ್ನು ಮಾತನಾಡಿಸಿದ್ದು ನಮ್ಮ ಸಂತೋಷ ಇಮ್ಮಡಿಯಾಗುವಂತೆ ಮಾಡಿತು ಎಂದು ಆಸ್ಕರ್‌ ಪ್ರಶಸ್ತಿ ವಿಜೇತ  ತಮಿಳುನಾಡಿನ ಮಧುಮಲೈ ಅರಣ್ಯ ಪ್ರದೇಶದ ತೆಪ್ಪಕಾಡು ಆನೆ ಶಿಬಿರದ ಬೊಮ್ಮ ಹೇಳಿದ್ದಾರೆ.
 

ಪ್ರಧಾನಿ ನಮ್ಮನ್ನು ಮಾತನಾಡಿಸಿದ್ದು ನಮ್ಮ ಸಂತೋಷ ಇಮ್ಮಡಿಯಾಗುವಂತೆ ಮಾಡಿತು ಎಂದು ಆಸ್ಕರ್‌ ಪ್ರಶಸ್ತಿ ವಿಜೇತ  ತಮಿಳುನಾಡಿನ ಮಧುಮಲೈ ಅರಣ್ಯ ಪ್ರದೇಶದ ತೆಪ್ಪಕಾಡು ಆನೆ ಶಿಬಿರದ ಬೊಮ್ಮ ಹೇಳಿದ್ದಾರೆ.ಏಷ್ಯಾನೆಟ್‌ ಸುವರ್ಣನ್ಯೂಸ್‌ ಜೊತೆ ಮಾತನಾಡಿದ ಅವರು, ಆನೆಯನ್ನು ಚೆನ್ನಾಗಿ ಸಾಕಿದ್ದೀರಿ ಎಂದು ಪ್ರಧಾನಿ ಹೇಳಿದರು. ಪ್ರಧಾನಿ ಬಂದು ಹೋದ ಮೇಲೆ ಜನ ನಮ್ಮನ್ನು ನೋಡುವ ದೃಷ್ಟಿಯೇ ಬೇರೆ ಆಗಿದೆ.  ಎಂದು ಸಂತಸ ವ್ಯಕ್ತಪಡಿಸಿದರು. ಹಾಗೇ ತಮಿಳುನಾಡು ಮುಖ್ಯಮಂತ್ರಿ  ನಮಗೆ ತಲಾ 1 ಲಕ್ಷ ರೂ ನೀಡಿ ಗೌರವಿಸಿದ್ದಾರೆ. ಪ್ರಧಾನಿ ಮೋದಿ ಬಂಡೀಪುರಕ್ಕೆ ಭೇಟಿ ನೀಡುವ ಒಂದು ತಿಂಗಳ ಮೊದಲು ತಮಿಳುನಾಡು ಮುಖ್ಯಮಂತ್ರಿಗಳು ನನ್ನನ್ನು ಹಾಗೂ ಬೆಳ್ಳಿಯನ್ನು ಚೆನ್ನೈಗೆ ಕರೆಸಿ ಗೌರವಿಸಿದ್ದರು ಎಂದು ತಿಳಿಸಿದರು.  ಇನ್ನು 1ಲಕ್ಷದಿಂದ ನಮ್ಮ ಬದುಕಲ್ಲಿ ಯಾವುದೇ ಬದಲಾವಣೆ ಆಗಲ್ಲ. ಹಣ ಬೇಕು ನಿಜ, ಆದರೆ ಬದುಕಲ್ಲಿ ಪ್ರೀತಿಯೂ ಮುಖ್ಯ. ಖುದ್ದು ಪ್ರಧಾನಿಯೇ ಬಂದು ನಮ್ಮನ್ನು ಮಾತನಾಡಿಸಿದ್ದು ನಮಗೆ ಮಾತ್ರವಲ್ಲ, ಕ್ಯಾಂಪ್‌ ಅಧಿಕಾರಿಗಳು ಮತ್ತು ತಮಿಳುನಾಡಿಗೇ ಖುಷಿ ತಂದಿದೆ ಎಂದು ತಮ್ಮ ಅಭಿಪ್ರಯಾವನ್ನು ವ್ಯಕ್ತ ಪಡಿಸಿದ್ದಾರೆ.
 

Video Top Stories