BIG 3: ಯಾದಗಿರಿಯ ಅಶೋಕ ನಗರದ ನಿವಾಸಿಗಳ ಬದುಕು ನರಕ: ಮೂಲಭೂತ ಸೌಕರ್ಯ ಸಿಗೋದು ಯಾವಾಗ?

ಯಾದಗಿರಿ ಜಿಲ್ಲೆಯಾಗಿ ಸುಮಾರು 14 ವರ್ಷಗಳು ಆಗಿವೆ. ಆದ್ರೆ ಜಿಲ್ಲಾ ಕೇಂದ್ರದಿಂದ ಕೂಗಳತೆ ದೂರದಲ್ಲಿರುವ ಅಶೋಕ ನಗರದ ನಿವಾಸಿಗಳ ಬದುಕು ನಿತ್ಯ ನರಕ ಯಾತನೆ‌ ಆಗಿದೆ ‌.

First Published Feb 10, 2023, 5:24 PM IST | Last Updated Feb 10, 2023, 5:24 PM IST

ಯಾದಗಿರಿಯ ಅಶೋಕ ನಗರದಲ್ಲಿ ಯಾವುದೇ ಮೂಲಭೂತ ಸೌಕರ್ಯ ಒದಗಿಸಿಲ್ಲ. ಜ‌ನರು ನಿತ್ಯ ಸಂಕಷ್ಟ ಅನುಭವಿಸುತ್ತಿದ್ದಾರೆ. ಯಾದಗಿರಿ ನಗರಸಭೆ ವ್ಯಾಪ್ತಿಯಲ್ಲಿ ಬರುವ ಈ ಅಶೋಕನಗರ ಅಲ್ಲಿನ ನಿವಾಸಿಗಳು ನಗರಸಭೆ, ಡಿಸಿ ಆಫೀಸ್ ಸೇರಿದಂತೆ ಎಲ್ಲಾ ಕಚೇರಿಗೂ ಅಲೆದಾಟ ನಡೆಸಿದ್ದಾರೆ. ನಮಗೆ ವಿದ್ಯುತ್ ಸಂಪರ್ಕ ಸೇರಿದಂತೆ ಮೂಲಭೂತ ಸೌಕರ್ಯ ಕಲ್ಪಿಸಿ ಅಂತಾ ಮನವಿ ಮಾಡಿದ್ರು ಯಾರೂ ಕೂಡ ಕ್ಯಾರೆ ಅಂತಿಲ್ಲ. ಕೆರೆಯ ಪಕ್ಕದಲ್ಲಿರುವ ಮನೆಗಳಿಗೆ ನೀರು ನುಗ್ಗುತ್ತಿರುವುದರಿಂದ ತಡೆಗೋಡಿ ನಿರ್ಮಿಸಿ ಅಂತ ಪರಿಪರಿಯಾಗಿ ಬೇಡಿಕೊಂಡ್ರು ಇತ್ತ ಕಡೇ ಯಾರೂ ಗಮನ ಹರಿಸುತ್ತಿಲ್ಲ. ಇದರಿಂದಾಗಿ ಸ್ಥಳಿಯರು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ. ವಿದ್ಯುತ್ ಕಂಬಗಳನ್ನು ಕಳೆದ 5 ವರ್ಷದಿಂದಲೇ ಅಳವಡಿಕೆ ಮಾಡಲಾಗಿದೆ. ಆದ್ರೆ ಯಾವುದೇ ವೈಯರ್ ಹಾಕಿಲ್ಲ, ಇದರಿಂದ ವಿದ್ಯುತ್ ಸಂಪರ್ಕವೇ ಇಲ್ಲ. ರಾತ್ರಿ ಕೆಲಸದಿಂದ ನಮ್ಮ ಮನೆಗೆ ಬರುವಾಗ ಮೊಬೈಲ್ ಟಾರ್ಚ್, ಬುಡ್ಡಿ ದೀಪ ಹಿಡಿದು ಓಡಾಡುತ್ತಿದ್ದಾರೆ. ಮಕ್ಕಳೆಲ್ಲಾ ಕತ್ತಲಲ್ಲೇ ಓದುವಂತಾಗಿದೆ. ದಯಮಾಡಿ ನಮಗೆ ಸೂಕ್ತ ವ್ಯವಸ್ಥೆ ಕಲ್ಪಿಸಿಕೊಡಿ ಎಂದು ಮನವಿ ಮಾಡ್ತಿದ್ದಾರೆ.