ಸಿಎಂ ಯಡಿಯೂರಪ್ಪ ಮುಂದಿದೆ ಬಿಗ್ ಚಾಲೆಂಜ್: ಕಗ್ಗಂಟಾದ ಸಚಿವ ಸಂಪುಟ ವಿಸ್ತರಣೆ
ಇದೀಗ ಸಂಪುಟ ವಿಸ್ತರಣೆ ಮಾಡೋದೆ ಯಡಿಯೂರಪ್ಪಗೆ ದೊಡ್ಡ ಚಿಂತೆಯಾಗಿದೆ| ಬಿಸಿತುಪ್ಪವಾಗಿ ಪರಿಣಮಿಸಿದ ಬಿಎಸ್‌ವೈ ಹೇಳಿಕೆ|ಬಿಜೆಪಿ ಶಾಸಕರೂ ಕೂಡ ಸಚಿವಸ್ಥಾನ ಆಕಾಂಕ್ಷಿಗಳಾಗಿದ್ದಾರೆ| ಸವಾಲುಗಳನ್ನು ಬಿಎಸ್‌ವೈ ಹೇಗೆ ನಿಭಾಯಿಸುತ್ತಾರೆ ಅನ್ನೋದು ಮಿಲಿಯನ್ ಡಾಲರ್ ಪ್ರಶ್ನೆ|
ಬೆಂಗಳೂರು(ಡಿ.19): ಕಾಂಗ್ರೆಸ್-ಜೆಡಿಎಸ್ ಶಾಸಕರನ್ನು ಆಪರೇಷನ್ ಕಮಲದ ಮೂಲಕ ಬಿಜೆಪಿಗೆ ಕರೆ ತಂದು ಉಪಚುನಾವಣೆಯಲ್ಲಿ 12 ಸೀಟು ಗೆಲ್ಲುವ ಮೂಲಕ ಸಿಎಂ ಯಡಿಯೂರಪ್ಪ ಸರ್ಕಾರವನ್ನ ಸೇಫ್ ಮಾಡಿಕೊಂಡಿದ್ದಾರೆ. ಆದರೆ, ನಿಜವಾದ ಚಾಲೆಂಜ್ ಇದೀಗ ಎದುರಾಗಿದೆ. ಇದೀಗ ಸಂಪುಟ ವಿಸ್ತರಣೆ ಮಾಡೋದೆ ಯಡಿಯೂರಪ್ಪಗೆ ದೊಡ್ಡ ಚಿಂತೆಯಾಗಿದೆ. ಎಲ್ಲ ಅನರ್ಹ ಶಾಸಕರಿಗೆ ಮಂತ್ರಿಗಿರಿ ನೀಡುತ್ತೇನೆ ಎಂದು ಯಡಿಯೂರಪ್ಪ ಉಪಚುನಾವಣೆ ಸಂದರ್ಭದಲ್ಲಿ ಬಹಿರಂಗವಾಗಿಯೇ ಹೇಳಿದ್ದರು. ಇದೇ ಹೇಳಿಕೆ ಬಿಎಸ್‌ವೈಗೆ ಬಿಸಿತುಪ್ಪವಾಗಿ ಪರಿಣಮಿಸಿದೆ.
ಉಪಚುನಾವಣೆ ಮುಗಿದು ಇಂದಿಗೆ 16 ದಿನಗಳು ಕಳೆದರೂ ಯಾರಿಗೂ ಸಚಿವ ಸ್ಥಾನ ಹಂಚಿಕೆಯಾಗಿಲ್ಲ. ಏತನ್ಮಧ್ಯೆ ಮೂಲ ಬಿಜೆಪಿ ಶಾಸಕರೂ ಕೂಡ ಸಚಿವಸ್ಥಾನ ಆಕಾಂಕ್ಷಿಗಳಾಗಿದ್ದಾರೆ. ಹೀಗಾಗಿ ಸಚಿವ ಸಂಪುಟ ವಿಸ್ತರಣೆ ಮಾಡೋದು ಯಡಿಯೂರಪ್ಪ ತಲೆ ನೋವಿಗೆ ಕಾರಣವಾಗಿದೆ. ಇವೆಲ್ಲ ಸವಾಲುಗಳನ್ನು ಬಿಎಸ್‌ವೈ ಹೇಗೆ ನಿಭಾಯಿಸುತ್ತಾರೆ ಅನ್ನೋದು ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.