ಬಿಗ್ 3 ಇಂಪ್ಯಾಕ್ಟ್: ಗುರುಮಠಕಲ್ ಪಟ್ಟಣದ 131 ಫಲಾನುಭವಿಗಳಿಗೆ ಸೈಟ್ ಭಾಗ್ಯ

ಸುವರ್ಣ ನ್ಯೂಸ್ ಬಿಗ್ 3 ವರದಿ ಇಂಪ್ಯಾಕ್ಟ್ ಆಗಿದ್ದು,ಬಿಗ್3ಯ ಒಂದೇ ಒಂದು ವರದಿಯಿಂದ 131 ಜನರಿಗೆ ಸೈಟ್ ಭಾಗ್ಯ ಸಿಕ್ಕಿದೆ. ಈ ಕುರಿತು ಇಲ್ಲಿದೆ ಡಿಟೇಲ್ಸ್.
 

First Published Mar 6, 2023, 2:35 PM IST | Last Updated Mar 6, 2023, 2:36 PM IST

ಯಾದಗಿರಿ ಜಿಲ್ಲೆಯ  ಗುರುಮಠಕಲ್ ಪಟ್ಟಣದಲ್ಲಿ ಸೈಟ್ ಸಿಗುತ್ತೆ  ಎನ್ನುವ ಭರವಸೆಯಲ್ಲಿ 30 ವರ್ಷಗಳಿಂದ ಫಲಾನುಭವಿಗಳು ಕಾಯುತ್ತಿದ್ದರು. ಆದ್ರೆ  ಇವರಿಗೆ ಸಿಗಬೇಕಾದ ಸೈಟ್ ಮಾತ್ರ ಸಿಗಲಿಲ್ಲ. 1991-92ರ ಅವಧಿಯಲ್ಲಿ ಅಂದಿನ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರ ಅಧಿಕಾರದ ಅವಧಿಯಲ್ಲಿ 131 ಬಡ ಫಲಾನುಭವಿಗಳನ್ನ ಗುರುತಿಸಿ ಪಟ್ಟಣ ಪಂಚಾಯತಿಯಿಂದ 20X30 ನಿವೇಶನ ನೀಡಲು ಹಕ್ಕುಪತ್ರ ವಿತರಣೆ ಮಾಡಿದೆ. ಆದ್ರೆ 30ವರ್ಷ ಕಳೆದ್ರು ಕೂಡ ಫಲಾನುಭವಿಗಳಿಗೆ ಜಾಗವನ್ನ ನೀಡದೆ ಅಧಿಕಾರಿ, ಜನಪ್ರತಿನಿಧಿಗಳು ಬಡ ಜನರ ಜೀವನದ ಜೊತೆ ಚೆಲ್ಲಾಟ ಆಡುತ್ತಿದ್ದರು.ಈ ಬಗ್ಗೆ ನಾಲ್ಕು ತಿಂಗಳ ಹಿಂದೆ ಬಿಗ್3ಯಲ್ಲಿ ವರದಿ ಪ್ರಸಾರ ಮಾಡಲಾಗಿತ್ತು, ವರದಿ ಪ್ರಸಾರ ಬೆನ್ನಲ್ಲೇ  ಶಾಸಕ ನಾಗನಗೌಡ ಕಂದಕೂರು ಅವರು ಸೈಟ್ ವಿತರಣೆ ಮಾಡಿದ್ದಾರೆ .